ಅಂತರಾಷ್ಟ್ರೀಯ ಸುದ್ದಿ

ಆಫ್ಘಾನ್‌ನಿಂದ ಅಮೆರಿಕ ಸೇನೆ ಹಿಂದಕ್ಕೆ: ಭಾರತಕ್ಕೆ ಸಮಸ್ಯೆ ಆಗುವ ಸಾಧ್ಯತೆ

ಆಫ್ಘಾನಿಸ್ತಾನದಲ್ಲಿನ ಅಮೆರಿಕಾ ಸೇನಾ ಪಡೆಯ ಅರ್ಧಭಾಗದಷ್ಟು ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುವುದಕ್ಕೆ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಆ ದೇಶ ನೀಡಿದ್ದಾರೆ.ಅಧ್ಯಕ್ಷ ಟ್ರಂಪ್ ಅವರ ಈ ನಿರ್ಧಾರ ಆಫ್ಘಾನಿಸ್ತಾನವನ್ನು ನಡು ನೀರಿನಲ್ಲಿ ಬಿಡುವುದರ ಜೊತೆಗೆ ಆಫ್ಘಾನಿಸ್ತಾನದ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿರುವ ಭಾರತದ ಯತ್ನಕ್ಕೂ ಭಾರಿ ಹಿನ್ನೆಡೆಯಾಗಲಿದೆ.

ಈಗಾಗಲೇ ಸಿರಿಯಾದಿಂದ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳಲು ತೀರ್ಮಾನಿಸಿರುವ ಅಧ್ಯಕ್ಷ ಟ್ರಂಪ್, ಆಫ್ಘಾನಿಸ್ತಾನದಲ್ಲಿರುವ 15,000 ಮಂದಿ ಯೋಧರಲ್ಲಿ ಶೇ. 50ರಷ್ಟು ಮಂದಿಯನ್ನು ವಾಪಸ್ಸು ಕರೆಸಿಕೊಳ್ಳುವ ಬಗ್ಗೆ ನಿನ್ನೆ ಶುಕ್ರವಾರ ಆದೇಶ ನೀಡಿದ್ದಾರೆ.ಅಧ್ಯಕ್ಷ ಟ್ರಂಪ್ ಅವರ ಈ ನಿರ್ಧಾರದಂತೆ ಆಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ವಾಪಸ್ಸು ಹೋಗುವುದರಿಂದ ಅಲ್ಲಿ ಮತ್ತೆ ತಾಲಿಬಾನ್ ಉಗ್ರರು ಪುಟಿದೇಳುತ್ತಾರೆ. ಹಾಗೆಯೇ ಪಾಕಿಸ್ತಾನ ಮೂಲದ ವಿವಿಧ ಉಗ್ರ ಸಂಘಟನೆಗಳೂ ಅಲ್ಲಿ ಬಲವಾಗಿ ಬೀಡು ಬಿಡುತ್ತವೆ. ಉಗ್ರರ ಪ್ರಾಬಲ್ಯ ಅಲ್ಲಿ ಹೆಚ್ಚಾದಷ್ಟು ಅಲ್ಲಿಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಭಾರತೀಯ ತಂಡಗಳಿಗೆ ಅಭದ್ರತೆ ಎದುರಾಗುತ್ತದೆ.

Loading...

ಅಭಿವೃದ್ದಿ ಕಾರ್ಯ ಕುಂಟಿತಗೊಳ್ಳುತ್ತದೆ. ಎರಡನೆಯದಾಗಿ ಈಗಾಗಲೇ ತಾಲಿಬಾನ್ ಸೇರಿದಂತೆ ಉಗ್ರ ಸಂಘಟನೆಗಳ ದಾಳಿಗಳಿಂದ ತತ್ತರಿಸಿ ಹೋಗಿರುವ ಆಫ್ಘಾನಿಸ್ತಾನ ಮತ್ತೊಮ್ಮೆ ಅವರ ತೆಕ್ಕೆಗೆ ಹೋಗುವಂತಾಗುತ್ತದೆ.ಅಧ್ಯಕ್ಷರ ಈ ನಿರ್ಧಾರವನ್ನು ರಕ್ಷಣಾಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ವಿರೋಧಿಸಿ, ತಮ್ಮ ಹುದ್ದೆಗೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಟ್ರಂಪ್‌ರ ಈ ನಿರ್ಧಾರವನ್ನು ಅಮೆರಿಕಾದ ಹಿರಿಯ ಸೇನಾಧಿಕಾರಿಗಳು, ರಕ್ಷಣಾ ತಜ್ಞರು ಬಹುವಾಗಿ ಟೀಕಿಸಿದ್ದಾರೆ.

  • 143
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...