ಕ್ರೀಡೆ-ಕ್ರಿಕೆಟ್

ಒಂದು ವರ್ಷದ ನಂತರ ದುಬೈನಲ್ಲಿ ಭಾರತ್-ಪಾಕ್ ಮಧ್ಯೆ ಬಿಗ್‌ಫೈಟ್


ನವದೆಹಲಿ : ಕ್ರಿಕೆಟ್ ಅಭಿಮಾನಿಗಳು ಬಹುದಿನದಿಂದ ನಿರೀಕ್ಷಿಸುತ್ತಿರುವ ಭಾರತ-ಪಾಕಿಸ್ತಾನ ತಂಡಗಳ ಹಣಾಹಣಿಗೆ ಕ್ರೀಡಾಂಗಣ ಸಜ್ಜಾಗಿದೆ. ಸುಮಾರು ಒಂದು ವರ್ಷದ ನಂತರ ದುಬೈನಲ್ಲಿ ಭಾರತ್-ಪಾಕ್ ಮಧ್ಯೆ ಬಿಗ್‌ಫೈಟ್ ನಡೆಯಲಿದೆ.ಕ್ರಿಕೆಟ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ತಂಡಗಳ ಹಣಾಹಣಿ ನೋಡುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಗುತ್ತಿದೆ. ಉಭಯ ದೇಶಗಳ ರಾಜಕೀಯ ಸಂಬಂಧ ಹಳಸಿರುವ ಕಾರಣ ಎರಡೂ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯಗಳು ನಡೆದಿರಲಿಲ್ಲ, ಈ ವೇಳೆ ೨೦೧೮ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಭಾರತ ಸೆಪ್ಟೆಂಬರ್ ೧೯ ರಂದು ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಭಾರತ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸೆಪ್ಟೆಂಬರ್ ೧೯ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಇದಕ್ಕೆ ಒಂದು ದಿನ ಮೊದಲು ಟೀಂ ಇಂಡಿಯಾ ಅರ್ಹತಾ ಪಂದ್ಯವನ್ನು ಆಡಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿವೆ. ಯುಎಇ, ಸಿಂಗಾಪುರ, ಓಮನ್, ನೇಪಾಳ, ಮಲೇಷ್ಯಾ ಮತ್ತು ಹಾಂಗ್ ಕಾಂಗ್ ತಂಡಗಳಲ್ಲಿ ಯಾವ ತಂಡ ಅರ್ಹತೆ ಪಡೆಯಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಎ ತಂಡದಲ್ಲಿ ಭಾರತ-ಪಾಕ್ ಇರಲಿದ್ದು, ಬಿ ತಂಡದಲ್ಲಿ ಬಾಂಗ್ಲಾದೇಶ, ಅಪಘಾನಿಸ್ತಾನ ಹಾಗೂ ಶ್ರೀಲಂಕಾ ಸ್ಥಾನಪಡೆದಿವೆ.

Loading...

ಏಷ್ಯಾಕಪ್ ಪಂದ್ಯಾವಳಿಯ ಮೊದಲ ಪಂದ್ಯ ದುಬೈನಲ್ಲಿ ಸೆಪ್ಟೆಂಬರ್ ೧೫ ರಂದು ನಡೆಯಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ ೨೫ ರಂದು ನಡೆಯಲಿದೆ.ವೇಳಾಪಟ್ಟಿ – ಸೆ,೧೫ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ, ಸೆ. ೧೬ ಪಾಕಿಸ್ತಾನದ ವಿರುದ್ಧ ಕ್ವಾಲಿಫೈಯರ್, ಸೆ. ೧೭ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ, ಸೆ. ೧೮ ಭಾರತ ವಿರುದ್ಧ ಕ್ವಾಲಿಫೈಯರ್, ಸೆ. ೧೯ ಭಾರತದ ವಿರುದ್ಧ ಪಾಕಿಸ್ತಾನ, ಸೆ. ೨೦ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ

ಸೂಪರ್ ೪ ಸ್ಟೇಜ್- ಸೆ.೨೧ ಗ್ರೂಪ್ ಎ ವಿನ್ನರ್ ವಿರುದ್ಧ ಗ್ರೂಪ್ ಬಿ ರನ್ನರ್ ಆಪ್, ಸೆ. ೨೧ ಗ್ರೂಪ್ ಬಿ ವಿನ್ನರ್ ವಿರುದ್ಧ ಗ್ರೂ ಎ ರನ್ನರ್ ಅಪ್, ಸೆ. ೨೩ ಗ್ರೂಪ್ ಎ ವಿನ್ನರ್ ವಿರುದ್ಧ ಗ್ರೂ ಎ ರನ್ನರ್ ಅಪ್, ಸೆ. ೨೩ ಗ್ರೂ ಬಿನ್ನ ವಿನ್ನರ್ ವಿರುದ್ಧ ಗ್ರೂಪ್ ಬಿ ರನ್ನರ್ ಅಪ್, ಸೆ. ೨೫ ಗ್ರೂಪ್ ಎ ವಿನ್ನರ್ ವಿರುದ್ಧ ಗ್ರೂಪ್ ಬಿ ವಿನ್ನರ್, ಸೆ. ೨೬ ಗ್ರೂಪ್ ಎ ರನ್ನರ್ ವಿರುದ್ಧ ಗ್ರೂಪ್ ಬಿ ರನ್ನರ್ ಅಪ್, ಸೆ. ೨೮ ಫೈನಲ್

  • 100
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...