ಇನ್ನಷ್ಟು

ಚಾಲುಕ್ಯರ ನಾಡಿನ ಹೆಮ್ಮೆಯ ಬದಾಮಿಯಲ್ಲಿನ ಆ ಗುಹೆಗಳ ಬಗ್ಗೆ ನಿಮಗೆ ಗೊತ್ತಿದೆಯೆ..??


ಬಾದಾಮಿಯು ಚಾಳುಕ್ಯರ ವಂಶಾಡಳಿತಕ್ಕೆ ನಾಂದಿ ಹಾಡಿದ ಸ್ಥಳ. ಇತಿಹಾಸದಲ್ಲೇ ಇಷ್ಟೊಂದು ಭವ್ಯ,ಬೃಹತ್ ಹಾಗು ಕಲಾನೈಪುಣ್ಯತೆಯಿಂದ ಕೂಡಿದ ಗುಹಾಲಯ ಇನ್ನೊಂದಿಲ್ಲ. ಇಲ್ಲಿ ಒಟ್ಟು ೪ ಗುಹಾಲಯಗಳಿದ್ದು ಅವು ಅನುಕ್ರಮವಾಗಿ ಶೈವ, ವೈಷ್ಣವ,ಜೈನ ಹಾಗು ಬೌದ್ಧ ಧರ್ಮವನ್ನು ಬಿಂಬಿಸುತ್ತವೆ. ಇಲ್ಲಿ ಬೃಹತ್ ಬೆಟ್ಟವನ್ನು ಬೆಣ್ಣೆಯಂತೆ ಕೊರೆದು ಕಲಾಸಿರಿಯನ್ನು ತುಂಬಿರುವುದು ಎಂಥವರನ್ನೂ ಚಕಿತರನ್ನಾಗಿಸುತ್ತದೆ. ಅಪಾರ ಶ್ರಮ, ಸಹನೆ ಹಾಗು ಸಂಪತ್ತನ್ನು ಬೇಡುವ ಈ ಕೆಲಸ ಚಾಳುಕ್ಯರ ಮಹತ್ವಾಕಾಂಕ್ಷೆಯಲ್ಲಿ ಅರಳಿ ನಿಂತಿರುವುದು ಕಂಡುಬರುತ್ತದೆ.
ಇಲ್ಲಿನ ೧ನೇ ಗುಹಾಲಯ ಶೈವ ಸಂಪ್ರದಾಯಕ್ಕೆ ಸೇರಿದೆ. ಇದನ್ನು ೫ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ೧ನೇ ಪುಲಿಕೇಶಿಯ ಕಾಲದಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಹರಿಹರ, ಅರ್ಧನಾರೀಶ್ವರ, ವಾತಾಪಿ ಗಣಪತಿ, ಕಾರ್ತಿಕೇಯ ಹಾಗು ನಟರಾಜ ಶಿಲ್ಪಗಳಿವೆ. ಸಭಾಮಂಟಪದಲ್ಲಿನ ಚೌಕಾಕಾರದ ಬೃಹತ್ ಕಂಬಗಳೂ, ಅದರ ಮೇಲೆ ಮೂಡಿಸಿರುವ ಮಣಿ ಕೆತ್ತನೆಗಳು ಅಲ್ಲಿನದೇ ಛತ್ತನಲ್ಲಿ ಆಕಾಶದಲ್ಲಿ ತೇಲಾಡುತ್ತಿರುವಂತೆ ಕೆತ್ತಿರುವ ಗಂಧರ್ವ ಪ್ರೇಮಿಗಳ ಶಿಲ್ಪಗಳು ಆಕರ್ಷಕವಾಗಿವೆ. ಇಲ್ಲಿರುವ ಪ್ರತಿಯೊಂದು ಶಿಲ್ಪವೂ ತನ್ನದೇ ಆದ ವೈವಿಧ್ಯತೆಯಿಂದ ವಿವರಪೂರ್ಣವಾಗಿವೆ. ಅದರಲ್ಲೂ 18ಕೈಗಳ ನಟರಾಜ, ಅದರ ಪ್ರತಿಯೊಂದು ಕೈಯಲ್ಲಿ ಹಿಡಿದ ವಿವಿಧ ಆಯುಧಗಳು, ಅದರ ನರ್ತನದ ವಿಶೇಷ ಭಂಗಿ ಮೋಹಕವಾಗಿದೆ.ಇಷ್ಟೊಂದು ಬಾಹುಗಳುಳ್ಳ ನಟರಾಜನ ಶಿಲ್ಪ ಪ್ರಪಂಚದಲ್ಲಿ ಮತ್ತೆಲ್ಲೂ ಕಾಣಸಿಗುವುದಿಲ್ಲ.

ಅಲ್ಲಿನ ಇನ್ನೊಂದು ವಿಶೇಷ ಶಿಲ್ಪ ಅರ್ಧನಾರೀಶ್ವರನದ್ದು ಇದರಲ್ಲಿನ ಪಾರ್ವತಿ ಭಾಗದಲ್ಲಿನ ಕಿರೀಟ, ಕರ್ಣಕುಂಡಲ, ಬಳೆಗಳು, ತೋಳ್ಬಂದಿ ಮುಂತಾದವುಗಳು ಹಾಗು ಶಿವನ ಭಾಗದಲ್ಲಿನ ಜಟಾಮುಕುಟ, ನಾಗಪರಶು, ಅರ್ಧಚಕ್ರ ಹಾಗು ನಂದಿಯ ಕೆತ್ತನೆಗಳು ಆಕರ್ಷಕವಾಗಿವೆ. ಅಲ್ಲೇ ಬುಡದಲ್ಲಿ ಶಿವನ ಈ ‘ಅರ್ಧನಾರೀಶ್ವರ’ನ ರೂಪಕ್ಕೆ ಕಾರಣನಾದ ಅಸ್ಥಿಪಂಜರದ ಭೃಂಗಋಷಿಯ ಕೆತ್ತನೆಯನ್ನು ವಿಶೇಷವಾಗಿ ಗಮನಿಸಬೇಕು. ಮತ್ತೊಂದು ಗಮನ ಸೆಳೆಯುವ ಶಿಲ್ಪವೆಂದರೆ ಲಕ್ಷ್ಮಿ-ಪಾರ್ವತಿ ಸಹಿತನಾಗಿರುವ ಹರಿ-ಹರನ ಶಿಲ್ಪ. ಇದರಲ್ಲೂ ಶಿವನ ಭಾಗದಲ್ಲಿರುವ ಜಟಾಮುಕುಟ, ಸರ್ಪಕುಂಡಲ, ಸರ್ಪಯಜ್ಞೋಪವೀತಗಳು ಗಮನ ಸೆಳೆಯುತ್ತವೆ. ಇದಲ್ಲದೇ ಇಲ್ಲಿನ ತ್ರಿಶೂಲಧಾರಿ ದ್ವಾರಪಾಲಕರು, ಐದುಹೆಡೆಯ ನಾಗರಾಜ, ವಿದ್ಯಾಧರ ದಂಪತಿಗಳು, ಪಾರ್ವತಿ ಕಲ್ಯಾಣ, ಭಿಕ್ಷಾಟನಾ ಶಿವ, ಸ್ತ್ರೀ-ಪುರುಷರ ಮಿಥುನ ಶಿಲ್ಪಗಳು ಆಕರ್ಷಕವಾಗಿವೆ ಚಾಳುಕ್ಯರ ಮಹತ್ವಾಕಾಂಕ್ಷೆಯಲ್ಲಿ ಅರಳಿ ನಿಂತಿರುವುದು ಕಂಡುಬರುತ್ತದೆ.

೨ನೇ ಗುಹಾಲಯ ವೈಷ್ಣವ ಗುಹಾಲಯ. ಇದನ್ನು ಚಾಲುಕ್ಯ ದೊರೆ ಕೀರ್ತಿವರ್ಮನ ಕಾಲದಲ್ಲಿ ನಿರ್ಮಿಸಲಾಗಿದೆ. ಇದು ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳನ್ನು ಹೊಂದಿದ್ದು ಪ್ರವೇಶದ್ವಾರದ ಎಡ-ಬಲ ಬದಿಯಲ್ಲಿ ಬೃಹತ್ ದ್ವಾರಪಾಲಕರು ಸ್ವಾಗತಿಸುತ್ತಾರೆ. ಇಲ್ಲಿನ ಭೂವರಾಹ ಮೂರ್ತಿ, ವಿರಾಟ್ ರೂಪದ ವಾಮನ-ತ್ರಿವಿಕ್ರಮನ ಶಿಲ್ಪ, ಶುಕ್ರಾಚಾರ್ಯರು ವಿಷ್ಣುವಿಗೆ ಅರ್ಘ್ಯ ಸಮರ್ಪಸಿತ್ತಿರುವುದು, ಬಲಿಚಕ್ರವರ್ತಿಯ ಸಂಹಾರ ಮುಂತಾದವುಗಳು ಗಮನ ಸೆಳೆಯುತ್ತವೆ.

ನಾಗರಾಜ, ವಿದ್ಯಾಧರ ದಂಪತಿಗಳು, ಪಾರ್ವತಿ ಕಲ್ಯಾಣ, ಭಿಕ್ಷಾಟನಾ ಶಿವ, ಸ್ತ್ರೀ-ಪುರುಷರ ಮಿಥುನ ಶಿಲ್ಪಗಳು ಆಕರ್ಷಕವಾಗಿವೆ.

೩ನೇ ಗುಹಾಲಯ ಮತ್ತೊಂದು ವೈಷ್ಣವ ಗುಹಾಲಯ. ಇದನ್ನು ಚಾಳುಕ್ಯ ದೊರೆ ಮಂಗಳೇಶನು ತನ್ನ ಸಹೋದರ ಕೀರ್ತಿವರ್ಮನ ಪಟ್ಟಾಭಿಷೇಕದ ನೆನಪಿಗೆ ನಿರ್ಮಿಸಿದ್ದಾನೆ. ಇದು ಇಲ್ಲಿರುವ ಎಲ್ಲ ಗುಹಾಲಯಗಳಲ್ಲಿ ಅತಿ ದೊಡ್ಡದು. ಇಲ್ಲೂ ಕೂಡ ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳು ಇವೆ. ಇಲ್ಲಿನ ೮ ಕೈಗಳ ವಿಷ್ಣುವಿನ ಬೃಹತ್ ಶಿಲ್ಪ, ಆ ಕೈಗಳಲ್ಲಿ ಹಿಡಿದಿರುವ ವಿವಿಧ ಆಯುಧಗಳ ವಿವರಪೂರ್ಣ ಕೆತ್ತನೆ, ಹಾಗು ಇದರ ಎದುರಲ್ಲೇ ವಾಮನಾವತಾರದ ಬೃಹತ್ ಶಿಲ್ಪ ಮೋಹಕವಾಗಿವೆ.

ಇಷ್ಟೇ ಅಲ್ಲದೆ ಶೇಷಶಯನ ವಿಷ್ಣು, ಬೃಹದಾಕಾರದ ಭೂವರಾಹ ಶಿಲ್ಪಗಳು, ನರಸಿಂಹ, ಹರಿಹರ ಹಾಗು ವಿಷ್ಣುಪುರಾಣದ ಕಥಾನಕದ ದೃಶ್ಯಾವಳಿಯ ಕೆತ್ತನೆಗಳನ್ನು ಕಾಣಬಹುದು.
ಇದಲ್ಲದೇ ಇಲ್ಲಿ ಜಂಬುಲಿಂಗ ದೇವಾಲಯ, ಕೆಳಗಿನ ಶಿವಾಲಯ ಹಾಗು ಮೇಲಿನ ಶಿವಾಲಯ ಹಾಗು ಭೂತನಾತ ದೇವಾಲಯಗಳಲ್ಲದೇ ಅಲ್ಲಲ್ಲಿ ಚಿಕ್ಕ-ಪುಟ್ಟ ಅಸಂಖ್ಯ ಗುಡಿ-ಗುಂಡಾರಗಳಿವೆ. ಅವುಗಳ ಮಧ್ಯದಲ್ಲೇ ಐತಿಹಾಸಿಕ ಮಹತ್ವದ ಕಪ್ಪೆಅರೆಭಟ್ಟನ ಶಾಸನವಿದೆ.

  • 765
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...