ಮಾಹಿತಿ - ತಂತ್ರಜ್ಞಾನ

ಬಲಿಪಾಡ್ಯಮಿ ಬಗ್ಗೆ ನಿಮಗೆಷ್ಟು ತಿಳಿದಿದೆ


ಬಲಿ ಎಂದರೆ ಹಿರಣ್ಯಕಷಿಪುವಿನ ಮರಿ ಮೊಮ್ಮಗ. ಈತ ಸಪ್ತ ಚಿರಂಜೀವಿ ಮೇಲೆ ಮತ್ತು ಸಪ್ತ ಮಹಾದಾನಿಗಳಲ್ಲಿ ಒಬ್ಬ.ಬಲಿಪಾಡ್ಯಮಿ ಆಚರಣೆಯ ಹಿಂದೆ ಹೀಗೊಂದು ವೃತ್ತಾಂತವಿದೆ. ಅದೆನೆಂದರೆ ಒಮ್ಮೆ ಬಲಿ ಚಕ್ರವರ್ತಿ ಅಶ್ವಮೇಧ ಯಾಗ ಮಾಡುತಿರುತ್ತಾನೆ. ಅಸುರರ ಕೈಗೆ ಮೂರು ಲೋಕಗಳು ಸೇರಿದರೆ ಅಪಾಯ ಎಂದು ಅರಿತ ಮಹಾವಿಷ್ಣು ವಾಮನನ ಅವತಾರದಲ್ಲಿ ಯಾಗ ನಡೆಯುತಿದ್ದ ಸ್ಥಳಕ್ಕೆ ಬರುತ್ತಾನೆ ಬ್ರಾಹ್ಮಣ ಬಾಲಕನನ್ನು ಕಂಡ ಬಲಿ ಏನು ಬೇಕೆಂದಾಗ ತನಗೆ ಮೂರು ಹೆಜ್ಜೆ ಭೂಮಿ ನೀಡುವಂತೆ ಕೇಳುತ್ತಾನೆ. ಅಧಕ್ಕೊಪ್ಪಿ ಬಲಿ ಭೂಮಿಯ ದಾನಕ್ಕೆ ಕಮಂಡಲದ.ನೀರನ್ನು ಪ್ರೋಕ್ಷಣೆ ಮಾಡಲು ಮುಂದಾದಾಗ‌ ಅಸುರ ಗುರು ಶುಕ್ರಾಚಾರ್ಯ ಅನುಮಾನಪಟ್ಟು ಕಮಂಡಲದ ನೀರು ಬರುವ ರಂದ್ರದ ಒಳಗೆ ಕಪ್ಪೆಯ ರೂಪದಲ್ಲಿ ಸೇರಿಕೊಂಡು ನೀರು ಬರದಂತೆ ತಡೆಯಲು ಯತ್ನಿಸುತ್ತಾರೆ.ಇದನ್ನು ಅರಿತ ನಾರಾಯಣ ಧರ್ಭೆಯೊಂದರಿಂದ ಕಪ್ಪೆಯ ಕಣ್ಣಿಗೆ ಚುಚ್ಚಿದ.‌

ಇದರಿಂದ ಶುಕ್ರಾಚಾರ್ಯ ತನ್ನ ಒಂದು ಕಣ್ಣು ಕಳೆದುಕೊಂಡರು.ನೀರಿನ ಪ್ರೋಕ್ಷಣೆ ಬಳಿಕ ವಾಮನ ರೂಪಿ ತ್ರಿವಿಕ್ರಮ ರೂಪ ತಾಳಿ ಒಂದು ಹೆಜ್ಜೆಯಿಂದ ಭೂಮಿ ಎರಡನೇ ಹೆಜ್ಜೆಗೆ ಅಕಾಶ ಎಣಿಸಿದ. ಮೂರನೇ. ಹೆಜ್ಜೆ ಇಡಲು ಜಾಗವಿಲ್ಲದಿದ್ದಾಗ‌ ಮೂರನೇ ಹೆಜ್ಜೆಯನ್ನು ತನ್ನ ತಲೆ ಮೇಲೆ ಇಡುವಂತೆ ಬಲಿ ಕೇಳುತ್ತಾನೆ‌. (ಯಾಗದ ಸಮಯದಲ್ಲಿ ಏನು ಕೇಳೀದರೂ ಇಲ್ಲ ಎನ್ನುವಂತಿಲ್ಲ.)ಅವನ ದಾನ ಗುಣ ಮೆಚ್ಚಿ ನಾರಾಯಣ ಅವನಿಗೆ ಪಾತಾಳಕ್ಕೆ ಲೋಕಕ್ಕೆ ಕಳುಹಿಸಿ ಅಲ್ಲಿನ ರಾಜ್ಯ ಅವನಿಗೆ ಬಿಟ್ಟುಕೊಟ್ಟು ಅವನ ರಾಜ್ಯದ ಪ್ರವೇಶ ದ್ವಾರದ ರಕ್ಷಣೆ ಮಾಡುವ ಜವಾಬ್ದಾರಿ ಸ್ವತಃ ತಾನೆ ಹೊತ್ತುಕೊಳ್ಳುತ್ತಾನೆ. (ಬಲಿಯ ಒಪ್ಪಿಗೆ ಇಲ್ಲದೆ ಯಾರೂ ಸಹ ಅವನ ರಾಜ್ಯದಲ್ಲಿ ಪ್ರವೇಶಿಸುವ ಅವಕಾವಿಲ್ಲ)ಮತ್ತು ವರ್ಷದಲ್ಲಿ ಒಮ್ಮೆ ಬಲಿಗೆ ಭೂಮಿಗೆ ಬರಲು ಅವಕಾಶ ನೀಡುತ್ತಾನೆ. ಆ ದಿನವನ್ನು ಇಂದು ಆಚರಣೆ ಮಾಡುವ ಬಲಿಪಾಡ್ಯಮಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಜನ ಅಂದು ದೀಪಗಳನ್ನು ಹಚ್ಚುತ್ತಾರೆ ಮತ್ತು ಅಂದು ಮುಖ್ಯವಾಗಿ ಬಲೀಂದ್ರ ಪೂಜೆ ಮಾಡುತ್ತಾರೆ‌. ಇದನ್ನು ನರಕ ಚತುರ್ಥಿಯ ಎರಡನೇ ದಿನ ಆಚರಿಸಲಾಗುತ್ತದೆ.
ಲೇಖನ ಕೃಪೆ: ವಿಜೇತ ಶೆಟ್ಟಿ

  • 50
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...