ನಮ್ಮ ಕರ್ನಾಟಕ ಸುದ್ದಿ

“ಭ್ರಷ್ಟಾಚಾರ ಆರೋಪ” ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿಗೆ ಕಪ್ಪು ಬಾವುಟ ಪ್ರದರ್ಶನ

ಬೆಂಗಳೂರು : ವಿಧಾನ ಸೌಧದಲ್ಲಿ ಸಿಕ್ಕಿದ ಪುಟ್ಟರಂಗಶೆಟ್ಟಿಯವರ ಹಣ ವೆಂದು ಆರೋಪಿಸಿರುವುದರಿಂದ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುಟ್ಟರಂಗಶೆಟ್ಟಿ ಧ್ವಜಾರೋಹಣ ಮಾಡಬಾರದು ಎಂದು ಜಿ.ಜೆ.ಪಿ ಕಾರ್ಯಕರ್ತರು ಕಾರ್ಯಕ್ರದ ಮಧ್ಯದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರು.ನಂತರ ಜಿ.ಜೆ.ಪಿ ಕಾರ್ಯಕರ್ತರನ್ನು ಪೋಲಿಸರು ಬಂದಿಸಿದರು.ಕಾರ್ಯಕ್ರಮದಲ್ಲಿ ಪೋಲಿಸ್ ಬಿಗಿ ಬಂದುಬಸ್ ಮಾಡಲಾಗಿತ್ತು ಅದರು ಸಚಿವರ ಭಾಷಣವೆಲ್ಲ ಮುಗಿದ ಮೇಲೆ ಮಕ್ಕಳ ಕಾರ್ಯಕ್ರಮದ ಮದ್ಯೆ ವೇದಿಕೆಯ ಎದುರು ಬಿ.ಜೆ.ಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿಯೆ ಬಿಟ್ಟರು.

ವೇದಿಕೆಯಲ್ಲಿ ಸಂಸದ ಆರ್,ಧೃವನಾರಾಯಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತ್ ಕಾರ್ಯನಿರ್ವಾಣಾಧಿಕಾರಿ ಡಾ.ಹರೀಶ್‍ಕುಮಾರ್, ಪೋಲೀಸ್ ವರಿಷ್ಠಾಧಿಕಾರಿ ಮನೋಜ್‍ಕುಮಾರ್ ಮೀನಾ ಹಾಗೂ ಇನ್ನು ಮುಂತಾದವರು ಹಾಜರಿದ್ದರುಇದಕ್ಕೆ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಮಾದ್ಯಮದವರಿಗೆ ಪ್ರತಿಕ್ರೀಯೆ ನೀಡಲಿಲ್ಲ.

  • 41
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...