ಅಂತರಾಷ್ಟ್ರೀಯ ಸುದ್ದಿ

ಭಾರತ ರಫೇಲ್ ಯುದ್ಧ ವಿಮಾನಕ್ಕಾಗಿ ಪರದಾಡುತ್ತಿದೆ, ಅತ್ತ ಚೀನಾ ಮಹಾ ಬಾಂಬ್ ತಯಾರಿಸಿ ಬೀಗುತ್ತಿದೆ

ಭಾರತ ತನ್ನ ಶತ್ರು ದೇಶಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೊರತೆಯಿರುವ ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಪರದಾಡುತ್ತಿದೆ.ಅತ್ತ ಚೀನಾ ಪ್ರಪಂಚದಲ್ಲೇ ಅತ್ಯಂತ ಶಕ್ತಿಯುತವಾದ ಪರಮಾಣೇತರ ಬಾಂಬ್‌ ತಯಾರಿಸಿರುವುದಾಗಿ ಹೇಳಿಕೊಂಡಿದೆ. ಅಮೆರಿಕ ಹೊಂದಿರುವ ‘ಮದರ್‌ ಆಫ್‌ ಆಲ್‌ ಬಾಂಬ್ಸ್‌’ಗೆ ಸಡ್ಡು ಹೊಡೆಯಲು ಚೀನಾ ಇದನ್ನು ತಯಾರಿಸಿದೆ ಎಂದು ಹೇಳಲಾಗಿದೆ. ಚೀನಾದ ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆ ‘ನೊರಿನ್‌ಕೊ’ ಇದೆ ಮೊದಲ ಬಾರಿಗೆ ಈ ದೈತ್ಯ ಬಾಂಬ್‌ ಅನ್ನು ಪ್ರದರ್ಶನ ಮಾಡಿರುವುದಾಗಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಬಾಂಬ್‌ ಅನ್ನು ‘ಎಚ್‌-6ಕೆ’ ವಿಮಾನದ ಮೂಲಕ ನಿರ್ಜನ ಪ್ರದೇಶದಲ್ಲಿ ಪರೀಕ್ಷಿಸಲಾಗಿದ್ದು, ಪರೀಕ್ಷೆ ವೇಳೆ ಭಾರಿ ಸ್ಫೋಟ ಕಂಡುಬಂದಿದೆ.

  • 137
    Shares

ಕಮೆಂಟ್ ಮಾಡಿ

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...