ಮಾಹಿತಿ - ತಂತ್ರಜ್ಞಾನ

ಗೋ ಪೂಜೆ ವಿಶೇಷ ಮಹತ್ವ


ದೀಪಾವಳಿಯ ಮೂರನೇ ದಿನ ಆಚರಿಸುವ ಒಂದು ಸಂಪ್ರದಾಯವೆ ಗೋ ಪೂಜೆ.ಗೋವುಗಳು ಮಾನವನ ಅದರಲ್ಲೂ ರೈತ ಭಾಂಧವರ ನೆಚ್ಚಿನ ಗೆಳೆಯ. ಗೋವುಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಮುಕ್ಕೋಟಿ ದೇವತೆಗಳ ಆವಾಸ ಗೋವುಗಳಲ್ಲಿ ಇರುತ್ತದೆ ಎಂಬ ನಂಬಿಕೆ ಇದೆ.ಹೀಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಡುವ ಗೋ ಪೂಜೆ ವಿಶೇಷ ಮಹತ್ವ ಹೊಂದಿದೆ.

ಅಂದು ಕೊಟ್ಟಿಗೆಯಲ್ಲಿ ಇರುವ ಗೋವುಗಳನ್ನು ಶುಚಿಗೊಳಿಸಿ ಸಿಂಗರಿಸಿ ಅವುಗಳ ಮೈ ಮೇಲೆ ಬಣ್ಣ ಬಣ್ಣದ ಚಿತ್ತಾರ ಬಿಡಿಸಲಾಗುತ್ತದೆ. ಅವಗಳಿಗೆಂದೆ ತಯಾರಿಸಿದ ವಿಶೇಷ ಆಹಾರವನ್ನು ಅವುಗಳಿಗೆ ನೀಡಲಾಗುತ್ತದೆ. ಗೋವು ಸಂತಸದಿಂದ ಅಂಬಾ ಎಂದು ಕೂಗಿದರೆ ಶುಭ ಎಂಬ ನಂಬಿಕೆ ಇದೆ. ಅರಶಿನ ಎಲೆಯಿಂದ ತಯಾರಿಸಿದ ಕಡಬುಗಳನ್ನ ಮೊದಲು ಗೋವುಗಳಿಗೆ ನೀಡಿ ಬಳಿಕ ಕುಟುಂಬದವರು ಸೇವಿಸುತ್ತಾರೆ. ಗದ್ದೆಯಲ್ಲಿನ ಫಸಲನ್ನು ಗೋವುಗಳಿಗೆ ನೀಡಲಾಗುತ್ತದೆ.ಗೋವುಗಳೆಂದರೆ ಕೃಷ್ಣನಿಗೆ ಪ್ರಿಯವಾದರಿಂದ ಈ ದಿನ ಗೋಪಾಲಕೃಷ್ಣನಿಗೆ ಕೆಲವರು ವಿಶೇಷ ಪೂಜೆ ಸಲ್ಲಿಸುತ್ತಾರೆ.

Loading...

ಗೋವರ್ಧನ ಪರ್ವತಕ್ಕೆ ಪ್ರದಕ್ಷಿಣೆ ಮಾಡುವದು ಶ್ರೇಷ್ಠ. ( ಗೋವರ್ಧನ ಪರ್ವತಕ್ಕೆ ಹೋಗಲು ಸಾದ್ಯವಿಲ್ಲದವರು ಗೋವರ್ಧನ ಪರ್ವತದ ಭಾವಚಿತ್ರ ವಿಗ್ರಹ ಅಥವಾ ಅನ್ನ ಇಲ್ಲವೇ ಸೆಗಣಿ ಬಳಸಿ ಗೋವರ್ಧನ ಪರ್ವತದ ಪ್ರತಿರೂಪವನ್ನು ತಯಾರಿಸುತ್ತಾರೆ. ಇಲ್ಲವೇ ಊರಿನಲ್ಲಿನ ಎಲ್ಲರ ಮನೆಯ ಸಿಂಗರಿಸಿದ ಹಸುಗಳನ್ನು ದೊಡ್ಡ ಬಯಲಿನಲ್ಲಿ ಬಿಟ್ಟು ಅದನ್ನೇ ಗೋವರ್ಧನ ಪರ್ವತ ಎಂದು ನಂಬುವ ಸಂಪ್ರದಾಯ ಇದೆ)ಹೀಗೆ ನಿಸ್ವಾರ್ಥಿ ಗುಣದ ರೈತನ ಮಿತ್ರವಾದ ಹಸುಗಳನ್ನು ಮತ್ತು ಅವುಗಳ ನಿಸ್ವಾರ್ಥ ಗುಣವನ್ನು ಈ ಒಂದು ದಿನವಾದರೂ ನೆನೆದು ಭಕ್ತಿಯಿಂದ ಪೂಜಿಸೋಣ
ಲೇಖನ:ವಿಜೇತ ಶೆಟ್ಟಿ ಚಿತ್ರಕೃಪೆ:ಆನ್ಯ ಶೆಟ್ಟಿ

  • 222
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...