ನಮ್ಮ ಕರಾವಳಿ ಸುದ್ದಿ

ಬೋಟ್ ಮುಳುಗಡೆ: ಎಂಟು ಸಾವು, ಹಲವರು ನಾಪತ್ತೆ

ಕಾರವಾರ: ಅರಬ್ಬೀ ಸಮುದ್ರದ ನಡುಗಡ್ಡೆಯಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬೋಟ್ ಮುಳುಗಿ ೮ ಜನರು ಸಾವೀಗಿಡಾಗಿದ್ದು ೭ ಮಂದಿ ನಾಪತ್ತೆಯಾಗಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸೋಮವಾರ ಸಂಭವಿಸಿದೆ.ಇಲ್ಲಿನ ಸಮುದ್ರದಲ್ಲಿರುವ ನಡುಗಡ್ಡೆ ಕೂರ್ಮಗಡದಲ್ಲಿ ವರ್ಷಕ್ಕೊಮ್ಮೆ ನಡೆಯುವ ಶ್ರೀ ನರಸಿಂಹ ದೇವರಜಾತ್ರಾ ಉತ್ಸವದಲ್ಲಿ ಪಾಲ್ಗೊಂಡು ವಾಪಸ್ಸು ಕಾರವಾರದತ್ತ ಆಗಮಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೋಟಿನಲ್ಲಿ ಸುಮಾರು ೨೨ ಜನರು ಇದ್ದರು ಎಂದು ಹೇಳಲಾಗುತ್ತಿದ್ದು ಬೋಟ್ ಮಗುಚಿದಾಗ ಕೆಲವರು ಮುಳುಗಿ ನಾಪತ್ತೆಯಾದರೆ ಈಜು ಬಂದ ಕೆಲವರು ಅದೇ ದೋಣಿಯನ್ನು ಏರಿ ಕುಳಿತಿದ್ದರು. ಇದೇ ಸಂದರ್ಭದಲ್ಲಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರುಜಾತ್ರೆಯಿಂದ ಮರಳುತ್ತಿದ್ದ ಬೋಟ್ ಮೂಲಕ ಕೆಲವರನ್ನು ರಕ್ಷಿಸಲಾಗಿದೆ.

Loading...

ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಇತರ ಬೋಟಿನವರು ಸೇರಿ ಒಟ್ಟೂ ಐವರು ಮಹಿಳೆಯರೂ ಸೇರಿ ೮ ಮೃತದೇಹಗಳನ್ನು ಹೊರ ತೆಗೆದಿದ್ದು ಅದರಲ್ಲಿ ೭ ಜನರ ಗುರುತು ಪತ್ತೆಯಾಗಿಲ್ಲ. ಇನ್ನು ನಾಪತ್ತೆಯಾದ ೭ ಜನರಿಗಾಗಿ ತೀವೃ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮೃತರಾದವರಲ್ಲಿ ನಿಲೇಶ ಪೆಡ್ನೇಕರ, ಜಯಶ್ರೀ ಕೊಠಾರಕರ, ಗಣಪತಿ ಕೊಠಾರಕರ ಇವರ ಗುರುತು ಪತ್ತೆಯಾಗಿದ್ದು ಇನ್ನುಳಿದ ನಾಲ್ವರು ಮಹಿಳೆಯರು ಹಾಗೂ ಒಬ್ಬ ಪುರುಷರ ಗುರುತು ಪತ್ತೆಯಾಗಬೇಕಿದೆ.

ಇನ್ನು ನವೀನ ಪೆಡ್ನೇಕರ, ನೇಹಾ ಪೆಡ್ನೇಕರ, ರಾಧಾ, ವೈಭವ ರಾಯ್ಕರ, ಮಹೇಶ ಶೇಟ್, ಆದರ್ಶ ಶಿರೋಡ್ಕರ ಹಾಗೂ ದರ್ಶನ ಶಿರೋಡ್ಕರ ಈ ೭ ಮಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್,ಎಸ್,ನಕುಲ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • 9
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...