ಅಂತರಾಷ್ಟ್ರೀಯ ಸುದ್ದಿ

ನಾಸಿರುದ್ದೀನ್ ಶಾ ಹೇಳಿಕೆ ಪರ ಬ್ಯಾಟ್ ಬಿಸಿದ ಪಾಕ್ ಪ್ರಧಾನಿ :ಅಲ್ಪಸಂಖ್ಯಾತರನ್ನು ಹೇಗೆ ಕಾಣಬೇಕೆಂದು ನಾವು ಮೋದಿ ಸರ್ಕಾರಕ್ಕೆ ತೋರಿಸುತ್ತೇವೆ: ಇಮ್ರಾನ್ ಖಾನ್

ನವದೆಹಲಿ :ಬಾಲಿವುಡ್ ನಟ ನಾಸಿರುದ್ದೀನ್ ಶಾ ಹೇಳಿಕೆ ಪಾಕ್ ಜನಕ ಮೊಹಮ್ಮದಾಲಿ ಜಿನ್ನಾ ಅವರ ಭಾವನೆಗಳ ಪ್ರತಿಧ್ವನಿಯಾಗಿದೆ. ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ಮೋದಿ ಸರಕಾರಕ್ಕೆ ಇದು ಪಾಠವಾಗಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಣ್ಣಿಸಿದ್ದಾರೆ.ಉತ್ತರ ಪ್ರದೇಶದ ಬುಲಂದರ್ ಶಹರ್ ಹಿಂಸಾಚಾರ ವೇಳೆ ಪೋಲೀಸ್ ಅಧಿಕಾರಿಯೊಬ್ಬರ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿ ಗುಂಪು ದಾಳಿಗಳು ಹೆಚ್ಚುತ್ತಿದ್ದ ಬಗ್ಗೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಕಳವಳ ವ್ಯಕ್ತಪಡಿಸಿದ್ದರು.”ನನ್ನ ಮಕ್ಕಳನ್ನು ನಾನು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನಾಗಿ ಬೆಳೆಸಿಲ್ಲ, ಅವರ ಬಗ್ಗೆ ನನಗೆ ಆತಂಕವಿದೆ” ಎಂದು ಶಾ ಹೇಳಿದ್ದರು.

ಪಂಜಾಬ್ ಸರ್ಕಾರದ ನೂರು ದಿನಗಳ ಸಾಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಮ್ರಾನ್ ಖಾನ್ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ.ಇದು ದೇಶದ ಸ್ಥಾಪಕ ಮಹಮದ್ ಅಲಿ ಜಿನ್ನಾ ಅವರ ದೂರದರ್ಶಿತ್ವದ ನಿಲುವು ಎಂದಿದ್ದಾರೆ.”ಆಧುನಿಕ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ, ಸಮಾನ ಹಕ್ಕುಗಳಿವೆ ಎನ್ನುವುದನ್ನು ನಮ್ಮ ಸರ್ಕಾರ ಖಚಿತಪಡಿಸುತ್ತದೆ. “ನಾವು ಅಲ್ಪಸಂಖ್ಯಾತರನ್ನು ಹೇಗೆ ಕಾಣಬೇಕೆಂದು ಮೋದಿ ಸರ್ಕಾರಕ್ಕೆ ತೋರಿಸಿಕೊಡಲಿದ್ದೇವೆ.ಆದರೆ ಭಾರತದಲ್ಲಿನ ಜನತೆ ಹೇಳುವಂತೆ ಅಲ್ಲಿ ಅಲ್ಪಸಂಖ್ಯಾತದಲ್ಲಿ ಸಮಾನ ನಾಗರಿಕರೆಂದು ಸಹ ಪರಿಗಣಿಸಲಾಗುವುದಿಲ್ಲ” ಖಾನ್ ಹೇಳಿದ್ದಾರೆ.

  • 48
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...