ರಾಷ್ಟ್ರೀಯ ಸುದ್ದಿ

ಐಸಿಸ್ ಸಂಘಟನೆಯ ಸಂಪರ್ಕ 9 ಮಂದಿ ಬಂಧನ

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳ ಥಾಣೆ ಮತ್ತು ಔರಂಗಾಬಾದ್‌ನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ನಿಷೇಧಿತ ಐಸಿಸ್ ಸಂಘಟನೆಯ ಸಂಪರ್ಕ ಹೊಂದಿದ ಆರೋಪದ ಮೇಲೆ 9 ಮಂದಿಯನ್ನು ಬಂಧಿಸಿದೆ.
ಕಳೆದ ಎರಡು ದಿನಗಳ ಅವಧಿಯಲ್ಲಿ ಎಟಿಎಸ್ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ 9 ಮಂದಿ ಶಂಕಿತರ ಚಲನ-ವಲನಗಳ ಮೇಲೆ ಕೆಲವು ವಾರಗಳ ಕಾಲ ನಿಗಾವಹಿಸಿ ಖಚಿತ ಮಾಹಿತಿಯಾಧಾರದ ಮೇಲೆ ಬಂಧಿಸಲಾಗಿದೆ. ಥಾಣೆಯ ಮುಂಬ್ರಾ ವಸತಿ ಪ್ರದೇಶ, ಅಮೃತ್‌ನಗರ, ಕೌಸಾ, ಅಲ್ಮಸ್ ಕಾಲೋನಿ ಮತ್ತು ಔರಂಗಾಬಾದ್‌ನ ಕೈಸರ್ ರಾಹತ್ ಕಾಲೋನಿ ಮತ್ತು ದಮ್ದಿ ಪ್ರದೇಶಗಳಲ್ಲಿ 2 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು ಎಂದು ಎಟಿಎಸ್ ತಿಳಿಸಿದೆ.

ಈ ದಾಳಿಯ ವೇಳೆ ರಾಸಾಯನಿಕಗಳು, ಆಸಿಡ್ ಬಾಟಲಿಗಳು, ಮಾರಕಾಸ್ತ್ರಗಳು, ಮೊಬೈಲ್ ಫೋನ್‌ಗಳು, ಹಾರ್ಡ್ ಡಿಸ್ಕ್‌ಗಳು, ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.ಈ ಎಲ್ಲ 9 ಮಂದಿಯನ್ನು ಭಾರತೀಯ ದಂಡ ಸಂಹಿತೆ 120 ಕಲಂ (ಬಿ)ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಟಿಎಸ್ ತಿಳಿಸಿದೆ.ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಈ 9 ಮಂದಿ ವಿರುದ್ಧ ಕ್ರಿಮಿನಲ್ ಸಂಚು, ಕಾನೂನು ಬಾಹಿರ ಚಟುವಟಿಕೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ 17 ವರ್ಷದ ಹುಡುಗನೂ ಸೇರಿದ್ದಾನೆ. ಬಂಧಿತರ ಪೈಕಿ ಫುಟ್ಬಾಲ್ ತರಬೇತುದಾರ, ಸೈಬರ್ ತಜ್ಞ ಹಾಗೂ ಇಂಜಿನಿಯರ್‌ಗಳು ಸೇರಿದ್ದಾರೆ. ಗಣರಾಜ್ಯೋತ್ಸವಕ್ಕೆ ಕೆಲ ದಿನಗಳಷ್ಟೆ ಬಾಕಿ ಇರುವ ಹಿನ್ನೆಲೆಯಲ್ಲಿ ಎಟಿಎಸ್ 9 ಶಂಕಿತರನ್ನು ಬಂಧಿಸಿದೆ.ಒಂದು ವರ್ಷದ ಹಿಂದೆ ಅಬುಜಾಹಿದ್‌ನನ್ನು ಸೌದಿಅರೇಬಿಯಾದಿಂದ ಮುಂಬೈ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆತನನ್ನು ಬಂಧಿಸಲಾಯಿತು. ಈತ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ನಕ್ಷೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎಟಿಎಸ್ ತಿಳಿಸಿದೆ.

  • 99
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...