ಕ್ರೀಡೆ-ಕ್ರಿಕೆಟ್

ಕಬಡ್ಡಿ : ಪಾಕಿಸ್ತಾನವನ್ನು ಧೂಳಿಪಟ ಮಾಡಿದ ಭಾರತ

ದುಬೈ: ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ.ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೋರಾಡಿದ ಭಾರತ 36-20 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದೆ.

Loading...


ದುಬೈನ ಆಲ್ ವಸಲ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಮೊದಲ ರೈಡ್‌ನಲ್ಲೇ ಅಜಯ್ ಠಾಕೂರ್ ಪಾಯಿಂಟ್ಸ್ ಪಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಪಾಕಿಸ್ತಾನ ರೈಡರ್‌ಗಳನ್ನ ಭಾರತದ ಡಿಫೆಂಡರ್ ಅಚ್ಚುಕಟ್ಟಾಗಿ ಟ್ಯಾಕಲ್ ಮಾಡಿದರು. ಹೀಗಾಗಿ ಮೊದಲಾರ್ಧಲ್ಲಿ ಭಾರತ 22-9 ಅಂಕಗಳ ಅಂತರದ ಮುನ್ನಡೆ ಪಡೆದುಕೊಂಡಿತು.


ದ್ವಿತಿಯಾರ್ಧದಲ್ಲೂ ಭಾರತದ ಆರ್ಭಟ ಮುಂದುವರಿಯಿತು. ಸೆಕೆಂಡ್ ಹಾಫ್‌ನಲ್ಲಿ ಪಾಕಿಸ್ತಾನ ಟ್ಯಾಕಲ್‌ನಿಂದ ಮೊದಲ ಅಂಕ ಪಡೆಯಿತು. ಆದರೆ ಚಾಂಪಿಯನ್ ಭಾರತದ ಮುಂದೆ ಪಾಕ್ ಆಟ ನಡೆಯಲಿಲ್ಲ.

ದ್ವಿತಿಯಾರ್ಧದ ಅಂತ್ಯದಲ್ಲಿ ಭಾರತ 36-20 ಅಂಕಗಳ ಮೂಲಕ ಗೆಲುವು ಸಾಧಿಸಿತು.

  • 1.7K
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...