ಸಿನಿಮಾ ಲೋಕ

ಕನ್ನಡದ ಕೆಜಿಎಫ್ ಮುಂದೆ ಮಂಕಾದ ಬಾಲಿವುಡ್‌ನ ಕಿಂಗ್‌ಖಾನ್ ಶಾರೂಖ್ ಖಾನ್ ಅಭಿನಯದ ಝೀರೋ

ಕನ್ನಡದ ಕೆಜಿಎಫ್ ಮುಂದೆ ಮಂಕಾದ ಬಾಲಿವುಡ್‌ನ ಕಿಂಗ್‌ಖಾನ್ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲದ ಪರಿಣಾಮ ಶಾರೂಖ್ ಅವರು ಚಿತ್ರರಂಗದಿಂದ ದೂರ ಉಳಿಯಲು ಮುಂದಾಗಿದ್ದಾರೆ.ಬಾಕ್ಸ್ ಆಫೀಸ್‌ನಲ್ಲಿ ‘ಝೀರೋ’ ಮೊದಲ ದಿನ ೨೦ ಕೋಟಿ ರೂ. ಗಳಿಸಿದರೂ ವಿಮರ್ಶೆಯಲ್ಲಿ ಝೀರೋ ಆಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಶಾರುಖ್ ಝೀರೋ ಎನ್ನುವ ಕಮೆಂಟ್‌ಗಳು ಹರಿದಾಡುತ್ತಿವೆ.

ನನ್ನ ಹಿಂದಿನ ಚಿತ್ರ ಜಬ್ ಹ್ಯಾರಿ ಮೆಟ್ ಸೇಜಲ್ ಸೋತಿತ್ತು. ಹಾಗಾಗಿ ‘ಝೀರೋ’ ಚಿತ್ರ ನನ್ನ ವೃತ್ತಿ ಬದುಕಿಗೆ ಮಹತ್ವದ ಸಿನಿಮಾ. ಈ ಚಿತ್ರ ಸೋತರೆ ೬-೧೦ ತಿಂಗಳು ಚಿತ್ರರಂಗದಿಂದ ದೂರ ಉಳಿಯುತ್ತೇನೆ. ನನ್ನ ಕೆಲಸಗಳ ಬಗ್ಗೆ ನನಗೆ ಗೊತ್ತಿದೆ. ಮತ್ತೆ ಹೊಸ ಭರವಸೆಯೊಂದಿಗೆ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ” ಎಂದು ಶಾರುಖ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Loading...

೨೦೧೩ರಲ್ಲಿ ತೆರೆಕಂಡ ಚೆನ್ನೈ ಎಕ್ಸ್‌ಪ್ರೆಸ್ ನಂತರ ಸತತ ಸೋಲಿನ ರುಚಿ ನೋಡುತ್ತಿರುವ ಶಾರೂಕ್‌ಗೆ ಈಗ ಮತ್ತೆ ಸೋಲಿನ ಕಹಿ ಅನುಭವವವಾಗಿದೆ. ಡಾನ್ ೩ ಚಿತ್ರದಲ್ಲಿ ಅವರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆಯಾದರೂ ಅದಿನ್ನೂ ಅಧಿಕೃತವಾಗಿಲ್ಲ. ಸಂದರ್ಶನದಲ್ಲಿ ಹೇಳಿದಂತೆ ನಡೆದುಕೊಂಡಿದ್ದೇ ಆದಲ್ಲಿ ೨೦೧೯ರಲ್ಲಿ ಅವರ ನಟನೆಯ ಯಾವುದೇ ಚಿತ್ರಗಳು ತೆರೆಕಾಣುವುದು ಅನುಮಾನವಾಗಿದೆ.

  • 1.1K
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...