ನಮ್ಮ ಕರಾವಳಿ ಸುದ್ದಿ

ನದಿಗೆ ಬಿದ್ದ ಬೊಲೆರೋ ಓರ್ವ ಮಹಿಳೆ ಸಾವು

ಮಂಗಳೂರು : ಲಾರಿಯೊಂದಕ್ಕೆ ಸೈಡ್ ಕೊಡುವ ವೇಳೆ ಬೊಲೇರೋ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ನದಿಗೆ ಹಾರಿದ ಘಟನೆ ಕಿನ್ನಿಗೋಳಿ ಸಮೀಪದ ಸಂಕಲಕರಿಯ ಬಳಿ ಇಂದು ಬೆಳಗ್ಗೆ ೯ ಗಂಟೆಯ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ವಾಹನದಲ್ಲಿದ್ದ ತಂದೆ ಹಾಗೂ ಇಬ್ಬರು ಮಕ್ಕಳನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ಡಯಾನಾ(೪೫) ಎಂಬ ಮಹಿಳೆ ಘಟನೆಯಲ್ಲಿ ನೀರುಪಾಲಾಗಿದ್ದಾರೆ. ವಾಹನದಲ್ಲಿ ದ್ದವರು ಕಾರ್ಕಳ ಬೋಳ ನಿವಾಸಿಗಳಾಗಿದ್ದು ಘಟನಾ ಸ್ಥಳದಲ್ಲಿ ಸಾವಿರಾರು ಮಂದಿ ಸೇರಿದ್ದಾರೆ.

ಘಟನೆಯ ವಿವರ:
ಬೋಳ ನಿವಾಸಿ ಡಯಾನಾ ತಮ್ಮ ಸೋದರಿಯ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ಬೊಲೆರೋ ವಾಹನದಲ್ಲಿ ಮಂಗಳೂರು ಕಡೆ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಮುಂಭಾಗದಲ್ಲಿ ಲಾರಿಯೊಂದು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದಿದ್ದು ಈ ವೇಳೆ ಬೊಲೆರೋ ಚಾಲಕ ಸೈಡ್ ಕೊಡುವ ವೇಳೆ ನಿಯಂತ್ರಣ ಕಳೆದುಕೊಂಡು ನದಿಗೆ ಹಾರಿದೆ. ಕೂಡಲೇ ಸಾರ್ವಜನಿಕರು ನೀರಿಗೆ ಹಾರಿ ರೋಪ್ ಸಹಾಯದಿಂದ ವಾಹನದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಹಾಗೂ ತಂದೆಯನ್ನು ರಕ್ಷಿಸಿದ್ದಾರೆ. ಡಯಾನಾ ಸೀಟ್ ಬೆಲ್ಟ್ ಹಾಕಿದ್ದು ಮುಂಭಾಗದ ಸೀಟ್‌ನಲ್ಲಿದ್ದರಿಂದ ಅವರನ್ನು ರಕ್ಷಿಸುವ ಪ್ರಯತ್ನ ಫಲಕೊಡಲಿಲ್ಲ.

Loading...

ಸೇತುವೆಗೆ ಕಿರುಡ್ಯಾಂ ನಿರ್ಮಾಣ ಮಾಡಲಾಗಿದ್ದು ಅದರ ಗೇಟ್ ಮುಚ್ಚಿದ್ದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಇದರಿಂದ ಮಹಿಳೆಯನ್ನು ರಕ್ಷಿಸಲಾಗಿಲ್ಲ ಎಂದು ತಿಳಿದುಬಂದಿದೆ. ಮಹಿಳೆಯ ಮೃತದೇಹವನ್ನು ಮೇಲಕ್ಕೆತ್ತಲು ಅಗ್ನಿಶಾಮಕದಳದ ನೆರವನ್ನು ಪಡೆಯಲಾಗಿದೆ. ವಾಹನ ನದಿನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟಿದ್ದಾರೆ. ವಾಹನವನ್ನು ಕ್ರೇನ್ ಬಳಸಿ ಮೇಲಕ್ಕೆತ್ತಲು ಕಾರ್ಯಾಚರಣೆ ನಡೆಸಲಾಗಿದೆ.

  • 27
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...