ಮಾಹಿತಿ - ತಂತ್ರಜ್ಞಾನ

ಲಕ್ಷ್ಮೀ ದೇವಿ ಪೂಜಾ ವಿಧಾನ


ಲಕ್ಮೀ ಹಣದ ಅಧಿದೇವತೆ. ಈಕೆಯ ಪೂಜೆಯಿಂದ ಧನ ಪ್ರಾಪ್ತಿ ಆಗುತ್ತದೆ. ಲಕ್ಷ್ಮಿ ಪೂಜೆ ಅಮಾವಾಸ್ಯೆ ದಿನ ಮಾಡಲಾಗುತ್ತದೆ. ಇದನ್ನು ಸಾಯಂಕಾಲ ಮಾಡಲಾಗುತ್ತದೆ.
ಪೂಜಾ ವಿಧಾನ
ಪೂಜಾ ಕೊಠಡಿ ಅಲಂಕರಿಸಿದೇವಿಯ ವಿಗ್ರಹ ಅಥವಾ ಫೋಟೋ ಇಟ್ಟು ಅದರೊಂದಿಗೆ ಮನೆಯಲ್ಲಿ ಇರುವ ಹಣ ಒಡವೆಇಟ್ಟು ಪೂಜೆ ಮಾಡಬೇಕು. ಅದಕ್ಕೂ ಮುನ್ನ ಗಣಪತಿ ಪೂಜೆ ಮಾಡಬೇಕು.ದೇವಿಯ ಆರಾಧನೆ ತುಂಬಾ ಸುಲಭ. ಈಕೆ ತಾಯಿಯಾಗಿದ್ದು ಮಕ್ಕಳ ಭಕ್ತಿಯನ್ನು ಬಯಸುತ್ತಾಳೆ. ಮೊದಲು ಸಂಕಲ್ಪ ಮಾಡಿ (ಇಲ್ಲಿ ಆ ದಿನದ ಸಂವತ್ಸರದ ಋತು ಮಾಸದ ಮಾಸ ಪಕ್ಷ ವಾರ ನಕ್ಷತ್ರದ ಉಲ್ಲೇಖ ಮಾಡಬೇಕು.) ಬಳಿಕ ದೇವಿಯ ಧ್ಯಾನ ಮಾಡಿ ಅವಾಹನೆ ಮಾಡಬೇಕು.16 ಬಗೆಯ ಉಪಚಾರ ದೇವಿಗೆ ಮಾಡಬೇಕು.
1 ಅವಾಹನೆ
2 ಆಸೀನ
3 ಪಾಧ್ಯ ( ಕಾಲು ತೊಳೆಯಲು ನೀರು ಕೊಡುವದು)
4 ಅರ್ಘ್ಯ ( ಕೈ.ತೊಳೆಯಲು ನೀರು ಕೊಡುವದು)
5 ಅಚಮನ ( ಕುಡಿಯಲು ನೀರು ಕೊಡುವದು)
6 ನೀರು ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು
7 ಧರಿಸಲು ಬಟ್ಟೆ ಒಡವೆಗಳನ್ನು ಸಮರ್ಪಿಸುವದು
8 ಹರಿದ್ರ ಕುಂಕುಮ ಶ್ರೀಗಂಧ‌‌‌ ಅಕ್ಷತ ಮಂತ್ರಾಕ್ಷತೆ ಅರ್ಪಿಸುವದು
9 ಹೂ ಮತ್ತು ಸತ್ರಗಳಿಂದ ಅಲಂಕಾರ ಮಾಡುವುದು
10 ಅರ್ಚನೆ
11 ಧೂಪ ಅರ್ಪಣೆ
12 ನೈವೇದ್ಯ ಮತ್ತು ತಾಂಬೂಲ ನೀಡುವದು
13 ದೀಪ ಸಮರ್ಪಣೆ14 ಕರ್ಪೂರದ ಮಂಗಳಾರತಿ
15 ನಮಸ್ಕಾರ
16ಪ್ರಾರ್ಥನೆ ಮಾಡುವುದುಮತ್ತು ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವದು.ಹೀಗೆ ಭಕ್ತಿಯಿಂದ ದೇವಿಯ ಪೂಜೆ ಮಾಡೋಣ. ಲಕ್ಮೀ ಕೃಪೆಗೆ ಪಾತ್ರರಾಗೋಣ
ಲೇಖನ-ವಿಜೇತ ಶೆಟ್ಟಿ

  • 178
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...