ಆರೋಗ್ಯ ಭಾಗ್ಯ

ಬಾಯಿಹುಣ್ಣು ಸಮಸ್ಯೆಗೆ ಇಲ್ಲಿದೆ ಮನೆ ಮದ್ದು


ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಈ ಕಾಲದಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತವೆ. ಇದರಿಂದ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ.ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳಲ್ಲಿ ಬಾಯಿಹುಣ್ಣು ಕೂಡ ಒಂದು. ನೋಡುವವರಿಗೆ ಕಾಣದ ಆದ್ರೆ ಅನುಭವಿಸುವವರಿಗೆ ಚಿತ್ರ ಹಿಂಸೆ ನೀಡುವ ಖಾಯಿಲೆ ಇದು. ಸರಿಯಾಗಿ ತಿನ್ನಲೂ ಸಾಧ್ಯವಿಲ್ಲ. ಏನನ್ನು ಕುಡಿಯಲೂ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಟ್ಟ ಲೈಫ್ ಸ್ಟೈಲ್‌ನಿಂದ ಕೂಡ ಈ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿ ಹೋದ್ರೆ ಅವರು ಮಲ್ಟಿವಿಟಮಿನ್ ಮಾತ್ರೆಯನ್ನು ನೀಡ್ತಾರೆ. ಇದು ಕ್ರಮೇಣವಾಗಿ ಬಾಯಿ ಹುಣ್ಣನ್ನು ಕಡಿಮೆ ಮಾಡುತ್ತದೆ. ಆದ್ರೆ ಬೇಗ ಬಾಯಿ ಹುಣ್ಣಿನ ನೋವು ಕಡಿಮೆಯಾಗಬೇಕೆಂದಾದ್ರೆ ಈ ಉಪಾಯಗಳನ್ನು ಅನುಸರಿಸಿ.

ದೇಹದ ಉಷ್ಣತೆ ಹೆಚ್ಚಾಗುವುದರಿಂದ ಈ ಬಾಯಿಹುಣ್ಣು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆಗಾಗ ನೀರನ್ನು ಕುಡಿಯುತ್ತಾ ಇರಿ. ಇದರಿಂದಾಗಿ ನಿಮ್ಮ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ.ಅರಿಶಿನದಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಹಾಗಾಗಿ ಆಹಾರದಲ್ಲಿ ಸಾಕಷ್ಟು ಅರಿಶಿನವನ್ನು ಬಳಸಿ. ಹನಿ ನೀರಿಗೆ ಅರಿಶಿನದ ಪುಡಿಯನ್ನು ಹಾಕಿ ಪೇಸ್ಟ್ ಮಾಡಿ ಅದನ್ನು ಹುಣ್ಣಾದ ಜಾಗಕ್ಕೆ ಹಚ್ಚಿ. ತಕ್ಷಣ ನೋವು ಶಮನವಾಗುತ್ತದೆ. ಜೊತೆಗೆ ಮತ್ತೆ ಬಾಯಿಹುಣ್ಣು ಬರುವುದನ್ನು ಇದು ತಪ್ಪಿಸುತ್ತದೆ.ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿ ಸ್ವಚ್ಛವಾಗುತ್ತದೆ. ಜೊತೆಗೆ ತಂಪಾದ ಪಾನೀಯಗಳನ್ನು ಹೆಚ್ಚಾಗಿ ಬಳಸಿ. ಮೊಸರು, ಮಜ್ಜಿಗೆ, ಹಣ್ಣಿನ ಜ್ಯೂಸ್‌ಗಳನ್ನು ತೆಗೆದುಕೊಳ್ಳಿ. ಐಸ್ ಕ್ರೀಂ ತಿನ್ನುವುದರಿಂದಲೂ ಸ್ವಲ್ಪ ಹಾಯ್ ಎನ್ನಿಸುತ್ತದೆ.

Loading...

ಆದಷ್ಟು ಬಿಸಿ ವಸ್ತುಗಳಿಂದ ದೂರ ಇರಿ. ಮಸಾಲೆ ಪದಾರ್ಥಗಳ ಸೇವನೆ ಬೇಡವೇ ಬೇಡ. ಉಪ್ಪಿನ ಆಹಾರದಿಂದ ಕೂಡ ದೂರವಿರಿ.ಟೀ-ಕಾಫಿಯನ್ನು ಸೇವಿಸಲು ಹೋಗಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತದೆ. ಮಲಬದ್ಧತೆ ಕಾಣಿಸಿಕೊಂಡು ಹುಣ್ಣು ಗುಣವಾಗಲು ಮತ್ತಷ್ಟು ಕಾಲ ಹಿಡಿಯುತ್ತದೆ.ತುಳಸಿಯಲ್ಲಿ ಕೂಡ ನೋವು ನಿವಾರಕ ಶಕ್ತಿ ಇದೆ. ಹಾಗಾಗಿ ದಿನದಲ್ಲಿ ಆಗಾಗ ತುಳಸಿ ಎಲೆಗಳನ್ನು ಜಗಿದು ನುಂಗುತ್ತಿರಿ. ಇದರಿಂದ ನೋವು ಕಡಿಮೆಯಾಗುವುದಲ್ಲದೆ ಗುಳ್ಳೆ ಕೂಡ ಕಡಿಮೆಯಾಗುತ್ತದೆ.

  • 148
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...