ರಾಷ್ಟ್ರೀಯ ಸುದ್ದಿ

ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ ಲ್ಯಾನ್ಸ್ ನಾಯಕ್ ನಾಜೀರ್ ಅಹ್ಮದ್ ವಾನಿಗೆ ಸೇನಾಪಡೆಯ ಅತ್ಯುನ್ನತ ಅಶೋಕ ಚಕ್ರ ಪುರಸ್ಕಾರ

ನವದೆಹಲಿ :ಜಮ್ಮು-ಕಾಶ್ಮೀರದ ಸೊಫಿಯಾನ್ ಜಿಲ್ಲೆಯಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ ಲ್ಯಾನ್ಸ್ ನಾಯಕ್ ನಾಜೀರ್ ಅಹ್ಮದ್ ವಾನಿ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಅಶೋಕ ಚಕ್ರ ಪುರಸ್ಕಾರ ನೀಡಿ ಗೌರವಿಸಲಿದೆ.ಶನಿವಾರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಶೋಕ ಚಕ್ರ ಪ್ರದಾನ ಮಾಡಲಾಗುತ್ತದೆ. 38 ವರ್ಷದ ನಾಜೀರ್, ಕುಲುಗಾಂನ ಅಶಂಜೀ ನಿವಾಸಿಯಾಗಿದ್ದು, ಭಯೋತ್ಪಾದಕರೊಂದಿಗೆ ಗುಂಡಿನ ದಾಳಿ ನಡೆಸುವ ವೇಳೆ ಹುತಾತ್ಮರಾಗಿದ್ದರು.ಈ ಹಿಂದೆ ಭಯೋತ್ಪಾದಕನಾಗಿದ್ದ ನಾಜೀರ್, ನಂತರ ಸಮಾಜದ ಮುಖ್ಯವಾಹಿನಿಗೆ ಬಂದು 2004ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು.

  • 124
    Shares

ಕಮೆಂಟ್ ಮಾಡಿ

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...