ಮಾಹಿತಿ - ತಂತ್ರಜ್ಞಾನ

ದೀಪಾವಳಿ ವಿಶೇಷ ನರಕಚತುರ್ದಶಿ ಪೌರಣಿಕ ಹಿನ್ನಲೆ ಮತ್ತು ಆಚರಣೆಯ ವಿಧಾನಗಳು


ದೀಪಾವಳಿ ಹಬ್ಬದ ಎರಡು ದಿನಗಳ ಮುನ್ನ ಆಚರಣೆ ಮಾಡುವ ಹಬ್ಬವೆ ನರಕ ಚತುರ್ಥಿ‌.ಇದು ನರಕಾಸುರನ ವಧೆಯ ಸೂಚಕದಂತೆ ಆಚರಣೆ ಮಾಡಲಾಗುತ್ತದೆ.ಇದನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ಥಿ ದಿನದಂದು ಆಚರಣೆ ಮಾಡಲಾಗುತ್ತದೆ.

ಇದರ ಆಚರಣೆ ಉದ್ದೇಶ ತಿಳಿಯಬೇಕಾದರೆ ಈ ಕತೆ ಓದಿ ಹಿಂದೆ ನರಕಾಸುರ (ಭೌಮಾಸುರ ಇನ್ನೊಂದು ಹೆಸರು) ಎಂಬ ಅಸುರ ಪ್ರಗಜ್ಯೋತಿಷ್ರಪುರ ಎಂಬ ರಾಜ್ಯವನ್ನು ಆಳುತ್ತಿದ್ದ. ಅಸುರ ಸ್ವಭಾವದಂತೆ ದೇವತೆಗಳಿಗೂ ಸಾಧು ಸಂತರಿಗೂ ಸ್ತ್ರೀಯರ ಪಾಲಿಗೆ ಕಂಟಕನಾಗಾಗಿದ್ದ. ತಾನು ಗದ್ದು ತಂದ 16000 ರಾಜಕುಮಾರಿಯರನ್ನ ಬಂಧಿಸಿ ಇಟ್ಟು ಅವರೆಲ್ಲರನೂ ವಿವಾಹವಾಗಲು ಯೋಜನೆ ರೂಪಿಸಿದ್ದ. ಇದನ್ನು ತಿಳಿದ ಕೃಷ್ಣ ಅಲ್ಲಿಗೆ ಬಂದು ಅಸುರನ ಹತ್ಯೆ ಮಾಡಿದ. ಈ ದಿನವೆ ನರಕ ಚತುರ್ಥಿ ಎಂಬ ಹೆಸರು ಪಡೆದಿದೆ.

Loading...

(ಈ 16,000 ಸ್ತ್ರಿಯರು ಹಿಂದಿನ ಜನ್ಮದಲ್ಲಿ ಋಷಿಮುನಿಗಳಾಗಿದ್ದ ಇವರು ಶ್ರೀಹರಿಯ ಭಕ್ತ ರಾಗಿದ್ದರು.ಕೃಷ್ಣಾವರತದಲ್ಲಿ ಗೋಪಿಕಾ ಸ್ತ್ರೀಯರಾಗಿ ಜನ್ಮ ಪಡೆಯುತ್ತಾರೆ. ನರಕಾಸುರ ಬಂಧನದಲ್ಲಿ ಇದ್ದ ಇವರು ಲೋಕದ ನಿಂದನೆಗೆ ಹೆದರಿ ಕೃಷ್ಣನ ಗಂಡನೆಂದು ಮನದಲ್ಲಿ ಆರಾಧಿಸುತ್ತಾರೆ. ಆದರೆ ಇವರನ್ನ ಕೃಷ್ಣ ಮದುವೆಯಾಗಿರುವುದಿಲ್ಲ. ಕೃಷ್ಣನ ನಾವು ಯಾವ ರೂಪದಲ್ಲಿ ರೀತಿಯಲ್ಲಿ ಆರಾಧಿಸಿದರೂ ಭಕ್ತಿಗೆ ಒಲಿಯುವ ದೇವನೆಂದು ಹಿಂದೂ ಪುರಾಣಗಳು ಹೇಳುತ್ತವೆ)

ಹೀಗೆ ಸಾಯುವ ಮುನ್ನ ಕೃಷ್ಣನ ಬಳಿ ಒಂದು ವರ ಬೇಡುತ್ತಿನೆ.ಅದೇನೆಂದರೆ ಈ ದಿನ ಯಾರು ಮಂಗಳ ಸ್ನಾನ ಮಾಡುವರೋ ಅವರಿಗೆ ನರಕ ಪ್ರಾಪ್ತಿ ಆಗದಿರಲಿ ಎಂದು ಬೇಡುತ್ತಾನೆ. ಹೀಗಾಗಿ ಈ ದಿನ ಅಭ್ಯಂಜನ ಮಾಡುತ್ತಾರೆ‌.(ಶ್ರೀ ಮಧ್ಭಾಗವತ ಪುರಾಣದ ಉಲ್ಲೇಖ)

ಆಚರಣೆ ಮಾಡುವ ವಿಧಾನ
ಆಕಾಶದಲ್ಲಿ ನಕ್ಷತ್ರ ಇರುವಾಗ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅಭ್ಯಂಜನ ಮಾಡಿ, ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲಿನವರಗೂ ಮತ್ತು ಕಾಲಿನಿಂದ ತಲೆಯ ವರೆಗೂ ನೀರನ್ನು ಸಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆ ಬಳಸಲಾಗುತ್ತದೆ. ಅಬ್ಯಂಜನದ ಬಳಿಕ ಯಮತರ್ಪಣ ಮಾಡುತ್ತಾರೆ ಇದರಿಂದ ಅಕಾಲಿಕ ಮೃತ್ಯು ತಪ್ಪುತ್ತದೆ ಎಂಬ ನಂಬಿಕೆ ಇದೆ.ವಿಧಿಬದ್ದವಾಗಿ ಈ ಆಚರಣೆ ಮಾಡಿದ ಬಳಿಕ ತಾಯಂದಿರು ಮಕ್ಕಳ ಆರತಿ ಬೆಳಗುತ್ತಾರೆ.( ನರಕಾಸುರನ ಹತ್ಯೆಯ ಬಳಿಕ ತಾಯಂದಿರು ಕೃಷ್ಣನಿಗೆ ಆರತಿ ಎತ್ತಿ ಮನೆಯೊಳಗೆ ಬರ ಮಾಡಿಕೊಂಡಿದ್ದರು) ಕೆಲವರು ಹಿಂಡ್ಲಚ್ಚಿ ಕಾಯಿಯನ್ನು ಕಾಲಿನಿಂದ ಜಜ್ಜಿ ಕಾಲಿನಿಂದ ಬಿಸಾಡುತ್ತಾರೆ. (ನರಕಾಸುರನ ಹತ್ಯೆಯ ಸೂಚಕದಂತೆ) ಇನ್ನೂ ಕಲವರು ಕಾಯಿಯ ರಸವನ್ನು ನಾಲಿಗೆಗೆ ಹಚ್ಚುತ್ತಾರೆ.ಮದ್ಯಾಹ್ನ ಬ್ರಾಹ್ಮಣರಿಗೆ ಭೋಜನ ನೀಡಿ ವಸ್ತ್ರಗಳನ್ನು ದಾನ ಮಾಡುತ್ತಾರೆ.ಪ್ರದೋಷ ಕಾಲದಲ್ಲಿ ದೀಪದಾನ ಮಾಡುತ್ತಾರೆ. ಪ್ರದೋಷ ವೃತ ತಗೆದುಕೊಂವರು ಪ್ರದೋಷ ಪೂಜೆ ಮತ್ತು ಶಿವ ಪೂಜೆ ಮಾಡುತ್ತಾರೆ.ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.
ಲೇಖನ ಕೃಪೆ:ವಿಜೇತ ಶೆಟ್ಟಿ

  • 102
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...