ಅಂತರಾಷ್ಟ್ರೀಯ ಸುದ್ದಿ

ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್‍ ಷರೀಫ್ ಗೆ 7 ವರ್ಷ ಜೈಲು ಶಿಕ್ಷೆ

ಪಾಕಿಸ್ತಾನದ ಪದಚ್ಯುತ ಪ್ರಧಾನಮಂತ್ರಿ ನವಾಜ್ ಷರೀಫ್ ವಿರುದ್ಧದ ಉಳಿದ ಎರಡು ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಇಂದು ಇಸ್ಲಾಮಾಬಾದ್‍ನ ಭ್ರಷ್ಟ್ರಾಚಾರ ನಿಗ್ರಹ ನ್ಯಾಯಾಲಯ ತೀರ್ಪು ನೀಡಿದ್ದು ನವಾಜ್‍ ಷರೀಫ್ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಉತ್ತರದಾಯಿತ್ವ ನ್ಯಾಯಾಲಯ(ಅಕೌಂಟಬೆಲಿಟಿ ಕೋರ್ಟ್)ದ ನ್ಯಾಯಾಧೀಶ ಮಹಮದ್ ಅರ್ಷದ್ ಮಲ್ಲಿಕ್, 68 ವರ್ಷದ ನವಾಜ್ ವಿರುದ್ಧದ ಫ್ಲಾಗ್‍ಶಿಪ್ ಇನ್ವೆಸ್ಟ್‍ಮೆಂಟ್ ಮತ್ತು ಅಲ್-ಅಝಿಝಿಯಾ ಪ್ರಕರಣಗಳ ವಿಚಾರಣೆಗಳನ್ನು ಪೂರ್ಣಗೊಳಿಸಿದ ನಂತರ ಡಿ.24ರಂದು ತೀರ್ಪು ನೀಡುವುದಾಗಿ ಘೋಷಿಸಿದ್ದರು.ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ವಿರುದ್ಧ ದಾಖಲಾಗಿರುವ ಉಳಿದೆರಡು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಡಿ.24ರೊಳಗೆ ಪೂರ್ಣಗೊಳಿಸುವಂತೆ ಪಾಕಿಸ್ತಾನ ಸುಪ್ರೀಂಕೋರ್ಟ್ ಗಡವು ನಿಗದಿಗೊಳಿಸಿತ್ತು.

  • 31
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...