ಅಂತರಾಷ್ಟ್ರೀಯ ಸುದ್ದಿ

ಸಾಂತಾ ಕ್ಲಾಸ್​ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಒಬಾಮಾ: ಮನಕಲಕುವ ವಿಡಿಯೋ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಂತ ಕ್ಲಾಸ್ ಕ್ಯಾಪ್ ತೊಟ್ಟು ವಾಷಿಂಗ್ಟನ್ ಮಕ್ಕಳ ರಾಷ್ಟ್ರೀಯ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ಹಂಚಿ ಸಂಭ್ರಮಿಸಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ, ವೈದ್ಯರಿಗೆ, ಸಿಬ್ಬಂದಿಗೆ ಒಬಾಮ ಕ್ರಿಸ್ಮಸ್ ಹಬ್ಬದ ಶುಭ ಕೋರಿದರು, ಹೊಸ ವರ್ಷದ ಶುಭಾಶಯವನ್ನು ತಿಳಿಸಿದರು.
ಕಷ್ಟದ ಸಂದರ್ಭದಲ್ಲಿ ರಾಷ್ಟ್ರಕ್ಕೆ ನರ್ಸ್ ಗಳು ಮತ್ತು ವೈದ್ಯರ ಅಗತ್ಯತೆ ತುಂಬಾ ಇದೆ. ವೈದ್ಯರು ಮತ್ತು ನರ್ಸ್ ಗಳು ನಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂದು ಒಬಾಮ ಶ್ಲಾಘಿಸಿದರು. ನಮ್ಮ ಜನರಿಗೆ ನಾವು ಶರಣಾಗುವುದು ಹಬ್ಬದ ವಿಶೇಷತೆ ಎಂದರು.

ಒಬಾಮಾ ಅವರು ಸಾಂತಾ ಕ್ಲಾಸ್​ ಉಡುಗೆಯಲ್ಲಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು ಜನರ ಹೃದಯ ಗೆದ್ದಿದೆ.

  • 600
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...