ಕ್ರೀಡೆ-ಕ್ರಿಕೆಟ್

ಜಿದ್ದಾಜಿದ್ದಿನ ಹೋರಾಟದಲ್ಲಿ ರಷ್ಯಾ ವಿರುದ್ದ ಕ್ರೊವೇಷಿಯಾಗೆ ಗೆಲುವು


ಮಾಸ್ಕೋ: ಪೆನಾಲ್ಟಿ ಶೂಟೌಟ್ ನಲ್ಲಿ ರಷ್ಯಾ ಮಣಿಸಿದಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ವಿಶ್ವಕಪ್ ಗೆಲ್ಲಲೇಬೇಕೆಂದು ಹೊರಟಿದ್ದಬರಷ್ಯಾದ ಕನಸು ನುಚ್ಚು ನೂರಾಗಿದೆ.ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊವೇಷಿಯಾ ತಂಡ ರಷ್ಯಾವನ್ನು 4-3 (2-2)ರಲ್ಲಿ ರೋಚಕವಾಗಿ ಮಣಿಸಿ ಸೆಮಿಫೈನಲ್ ಗೆ ಭರ್ಜರಿಯಾಗಿ ಲಗ್ಗೆ ಇಟ್ಟಿದೆ.

ಪಂದ್ಯದ ಕೇವಲ 31ನೇ ನಿಮಿಷದಲ್ಲೇ ಕ್ರೊವೇಷಿಯಾ ಪರ ಚೆರಿಶೇವ್ ಮೊದಲ ಗೋಲು ಭಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಅದೇ ಧಾಟಿಯಲ್ಲಿ ತಿರುಗೇಟು ನೀಡಿದ ರಷ್ಯಾ ಕೇವಲ 8 ನಿಮಿಷಗಳ ಅಂತರದಲ್ಲೇ ಗೋಲು ಭಾರಿಸಿ ತಿರುಗೇಟು ನೀಡಿತು. ಪಂದ್ಯದ 39ನೇ ನಿಮಿಷದಲ್ಲಿ ರಷ್ಯಾದ ಕ್ರಮಾರಿಕ್ ಆಕರ್ಷಕ ಗೋಲು ಗಳಿಸಿ ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು.

ಪಂದ್ಯದ ಫಲಿತಾಂಶಕ್ಕಾಗಿ ಹೆಚ್ಚುವರಿ ಸಮಯ ತೆಗದುಕೊಳ್ಳ ಲಾಯಿತು. ಆಗ ಆರಂಭಿಕ ಮುನ್ನಡೆ ಸಾಧಿಸಿದ ರಷ್ಯಾ 100ನೇ ನಿಮಿಷದಲ್ಲೇ ಗೋಲು ಬಾರಿಸಿ ಗೆಲುವಿನ ವಿಶ್ವಾಸ ಮೂಡಿಸಿತು. ಆದರೆ ತತ್ ಕ್ಷಣವೇ ತಿರುಗೇಟು ನೀಡಿದ ಕ್ರೊವೇಷಿಯಾ 115ನೇ ನಿಮಿಷದಲ್ಲಿ ಗೋಲು ಬಾರಿ ಸಮಬಲ ಸಾಧಿಸಿತು. ಆ ಮೂಲಕ ಉಭಯ ತಂಡಗಳು ಸಮಬಲ ಸಾಧಿಸಿದವು.
ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಆಗ ರಷ್ಯಾ ಪರ ಬ್ರಾಂಜೋವಿಕ್, ಮೋಡ್ರಿಕ್, ವಿಡಾ ಗೋಲು ಗಳಿಸಿದರು. ಆದರೆ ಕ್ರೊವೇಷಿಯಾ ಪರ ಡ್ಜಾಗೋವ್, ಫರ್ನಾಂಡ್ಸ್, ಇಗ್ನಾಶೆವಿಚ್, ಕುಝಾಯೇವ್ ಒಟ್ಟು ನಾಲ್ಕು ಗೋಲು ಗಳಿಸಿ ಕ್ರೊವೇಷಿಯಾ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಕ್ರೊವೇಷಿಯಾ ತಂಡ ಅತಿಥೇಯ ರಷ್ಯಾ ತಂಡವನ್ನು 4-3 ಅಂತರದಲ್ಲಿ ರೋಚಕವಾಗಿ ಮಣಿಸಿ ಸೆಮಿಫೈನಲ್ ಗೇರಿತು.

  • 43
    Shares

ಕಮೆಂಟ್ ಮಾಡಿ

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...