ಮಾಹಿತಿ - ತಂತ್ರಜ್ಞಾನ

ಸಾನ್ವಿ ಗುರುಪುರ


ಈಕೆಯ ಹೆಸರು ಸಾನ್ವಿ ಗುರುಪುರ ವಯಸ್ಸು ಕೇವಲ ಎಂಟು ವರ್ಷ ಕಲಿಯುತ್ತಿರುವುದು 3ನೇ ತರಗತಿ ಆದರೆ ಈಕೆಯ ಸಾಧನೆ ಬಗ್ಗೆ ನೀವು ತಿಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವದು ಖಚಿತ.ಈಕೆ ಸ್ವಲ್ಪವೂ ಹೆದರದೆ ಪಟಪಟನೆ ಮಾತನಾಡುತ್ತಾಳೆ. ಈಕೆ ಇದುವರೆಗೆ ಕೃಷ್ಣ ವೇಷಗಳಲ್ಲಿ ಭಾಗವಹಿಸಿ ಮೂವತ್ತು ಪ್ರಥಮ ಸ್ಥಾನ ಐದು ದ್ವಿತೀಯ ಸ್ಥಾನ ಪಡೆದಿದ್ದಾಳೆ.

ನೃತ್ಯದಲ್ಲಿ ಒಲವು ಹೊಂದಿರುವ ಈ ಬಾಲೆ V4 ಚಾನೆಲ್ ನ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಳೆ.ಅಲ್ಲದೆ ಡೈಜೆವರ್ಲ್ಡ್ ಚಾನೆಲ್‌ ಜ್ಯೂನಿಯರ್ ಮಸ್ತಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಳೆ. ಅಲ್ಲದೆ ನಮ್ಮ ಟಿವಿಯ ಡಾನ್ಸ್ ಟೂ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ 5ನೆ ಸುತ್ತು ತಲುಪಿದ್ದಾಳೆ.ಈಕೆ ಕೇವಲ ಸಾಂಸ್ಕೃತಿಕ ರಂಗದಲ್ಲಿ ಮಾತ್ರವಲ್ಲ ಶೈಕ್ಷಣಿಕ ರಂಗದಲ್ಲಿ ಕೂಡಾ ಮುಂದಿದ್ದಾಳೆ. ಶಾಲೆಯಲ್ಲಿ ನಡೆದ ಸಂಗೀತ ಭಾಷಣ ಛಧ್ಮವೇಷ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿ ಪಡೆದಿದ್ದಾಳೆ‌‌. ಪ್ರತಿಭಾ ಕಾರಂಜಿಯಲ್ಲಿಯೂ ಯಕ್ಷಗಾನದಲ್ಲಿ ತನ್ನ ಪ್ರತಿಭೆ ಪ್ರದರ್ಶನ ನೀಡಿದ ಈಕೆ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಳು. ಫೋರಂ ಮೊಲ್ ನಲ್ಲಿ ನಡೆದ ‌ಡಾನ್ಸ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದು, ಕಂಕನಾಡಿ ಇಲ್ಲಿ ನಡೆದ ಫಿಲ್ಮ್ ಡಾನ್ಸ್ ಸ್ಪರ್ಧೆಯಲ್ಲಿ ಕೂಡಾ ಪ್ರಥಮ ಸ್ಥಾನ ಬಾಚಿಕೊಂಡಿದ್ದಳು.ಇನ್ನೂ ಅಭಿನಯದಲ್ಲಿ ಕೂಡಾ ಈಕೆ ಮುಂದಿದ್ದು, ಕರುನಾಡ ಕಂದ ರಾಜಕುಮಾರ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾಳೆ.ಇದುವರೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಈಕೆಗೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿದ್ದು ಈ ಮೂಲಕ ಇವಳು ತಂದೆ ದಾಮೋದರ್ ಪೂಜಾರಿ ಮತ್ತು ತಾಯಿ ಶೋಭಾರ ಹೆಸರಿಗೆ ಕೀರ್ತಿ ತಂದಿದ್ದಾಳೆ.ಈಕೆಯ ಸಾಧನೆ ಹೀಗೆ ಮುಂದುವರೆಯಲಿ ಇನ್ನಷ್ಟು ಇವಳ ಕೀರ್ತಿ ಹೆಚ್ಚಲಿ ಉಜ್ವಲ ಭವಿಷ್ಯ ಈಕೆಯದಾಗಲಿ ಎಂದು ಆಶಿಸುತ್ತೇನೆ.
ಲೇಖನ – ವಿಜೇತ ಶೆಟ್ಟಿ

  • 209
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...