ಕ್ರೀಡೆ-ಕ್ರಿಕೆಟ್

ಆಂಗ್ಲರ ನೆಲದಲ್ಲಿ ಅಬ್ಬರಿಸಿದ ಸ್ಮೃತಿ ಮಂದಣ್ಣ :18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಭಾರತದ ಹೆಮ್ಮೆಯ ಪುತ್ರಿ

ನವದೆಹಲಿ :ಆಂಗ್ಲರ ನೆಲದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ಸ್ಮೃತಿ ಮಂದಣ್ಣ ವನಿತೆಯರ ಟಿ-೨೦ ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.ಕೆಐಎ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ೧೮ ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಹೊಸ ಸಾಧನೆ ಮಾಡಿದ್ದಾರೆ. ಮಳೆಯಿಂದ ಓವರ್‌ಗಳಿಗೆ ಕಡಿತ ಬಿದ್ದ ಪಂದ್ಯದಲ್ಲಿ ಸ್ಮೃತೀ ಈ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ ಸ್ಮೃತಿ ೨೫ ಎಸೆತಗಳಲ್ಲಿ ೫ ಬೌಂಡರಿ ಹಾಗೂ ೪ ಸಿಕ್ಸರ್ ನೆರವಿನಿಂದ ೫೨ ರನ್ ಬಾರಿಸಿ ಅಬ್ಬರಿಸಿದ್ದರು.

ಇಂಗ್ಲೀಷ್ ಪ್ರೀಮಿಯರ್ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಮೃತಿ ಮಂದಣ್ಣ ಭಾನುವಾರ ನಡೆದ ಲಾಂಗ್ಬೊರಗ್ ವಿರುದ್ಧ ಈ ಸಾಧನೆ ಮಾಡಿದರು. ಮಂದಣ್ಣ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ವೆಸ್ಟರ್ನ್ಸ್ಟ್ರೋಮ್ ತಂಡ ೨ ವಿಕೆಟ್‌ಗೆ ೮೨ ರನ್ ಕಲೆ ಹಾಕಿತು.ನ್ಯೂಜಿಲೆಂಡ್‌ನ ಸೋಫಿಯಾ ಡಿವೈನ್ ೨೦೦೫ ರಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ ೧೮ ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದ ದಾಖಲೆಯನ್ನು ಸ್ಮೃತಿ ಮಂದಣ್ಣ ಸರಿಗಟ್ಟಿದರು.ಟಿ೨೦ ಇತಿಹಾಸದಲ್ಲಿ ತ್ವರಿತಗತಿಯಲ್ಲಿ ಅರ್ಧಶತಕ ಗಳಿಸಿದ ಆಟಗಾರ್ತಿ ಎಂಬ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎನಿಸಿಕೊಂಡ ಸ್ಮೃತಿ ಅವರ ಸಾಧನೆಯನ್ನು ಕಂಡು ಹಲವಾರು ಮಂದಿ, ಟ್ವಿಟ್ಟರ್ ನಲ್ಲಿ ಶುಭಹಾರೈಸಿದ್ದಾರೆ. ಭಾರತದ ಹೆಮ್ಮೆ ಎಂದು ಕೊಂಡಾಡಿದ್ದಾರೆ. ಕ್ರಿಕೆಟ್ ದಿಗ್ಗಜ ಶ್ರೀಲಂಕಾದ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಅವರು ಕೂಡಾ ಸ್ಮೃತಿ ಬ್ಯಾಟಿಂಗ್ ಹೊಗಳಿದ್ದಾರೆ.
18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಸ್ಮೃತಿ ಮಂದಣ್ಣ ವಿಡಿಯೋ ಇಲ್ಲಿದೆ ನೋಡಿ

  • 2.1K
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...