ರಾಷ್ಟ್ರೀಯ ಸುದ್ದಿ ವೀಡಿಯೋಗಳು ಸಿನಿಮಾ ಲೋಕ

ಆರ್ಟಿಸ್ಟ್ ಅಸೋಸಿಯೇಷನ್ ಮುಂದೆ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ ಟಾಲಿವುಡ್ ನಟಿ


ಹೈದರಾಬಾದ್ :ತೆಲುಗು ಚಲನಚಿತ್ರ ನಟಿ ಶ್ರೀ ರೆಡ್ಡಿ ಹಾಲಿವುಡ್ ನಲ್ಲಿ ಪ್ರಾರಂಭವಾದ “ಮೀ ಟು ” ಅಭಿಯಾನದಿಂದ ಸ್ಫೂರ್ತಿಗೊಂಡು ಇಂದು ಹೈದರಾಬಾದ್ ನ ಚಲನಚಿತ್ರ ಆರ್ಟಿಸ್ಟ್ ಅಸೋಸಿಯೇಷನ್ ಮುಂದೆ ಅರೆ ನಗ್ನವಾಗಿ ಪ್ರತಿಭಟನೆ ನಡೆಸಿದರು.ಇಂದು ಬೆಳಗ್ಗೆ ಸುಮಾರು ಹನ್ನೊಂದು ಗಂಟೆಗೆ ತೆಲುಗು ಚಲನಚಿತ್ರ ಆರ್ಟಿಸ್ಟ್ ಅಸೋಸಿಯೇಷನ್ ಮುಂದೆ ಆಗಮಿಸಿದ ಇವರು ತಮಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದರು ಈ ಸಂದರ್ಭ ಜುಬಿಲಿ ಹಿಲ್ಸ್ ಪೊಲೀಸರು ನಟಿಯನ್ನು ವಶಕ್ಕೆ ಪಡೆದುಕೊಂಡರು ಎಂದು ವರದಿ ಆಗಿದೆ .ಆರ್ಟಿಸ್ಟ್ ಅಸೋಸಿಯೇಷನ್ ಸಂಘದ ಸದಸ್ಯತ್ವವನ್ನು ಕೋರಿ ಶ್ರೀ ರೆಡ್ಡಿಯವರು ಮನವಿ ಮಾಡಿದ್ದರು ಅಲ್ಲದೇ ಚಲನ ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಯ ಬಗ್ಗೆ “ಮೀ ಟು ” ಅಭಿಯಾನವನ್ನು ಬೆಂಬಲಿಸಲು ಆಗ್ರಹಿಸಿದ್ದರು.ಆರ್ಟಿಸ್ಟ್ ಅಸೋಸಿಯೇಷನ್ ಮಾತ್ರ ಬೆಂಬಲಿಸಲು ನಿರಾಕರಿಸಿತು ಈ ಕಾರಣದಿಂದ ನಟಿ ಅರೆ ನಗ್ನವಾಗಿ ಪ್ರತಿಭಟನೆ ನಡೆಸಿದರು ಎಂದು ತಿಳಿದು ಬಂದಿದೆ .

  • 45
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...