ಮಾಹಿತಿ - ತಂತ್ರಜ್ಞಾನ

ಹೆಬ್ಬುಲಿ ಬೇಟೆ !!


ಭಾರತ ಸರ್ಕಾರ ವನ್ಯಜೀವಿ ರಕ್ಷಣೆ ಸಲುವಾಗಿ ಅದರಲ್ಲೂ ವಿಶೇಷವಾಗಿ ಹುಲಿಯ ರಕ್ಷಣೆ ಸಲುವಾಗಿ ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಕಾರಣ ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ.
ಆದರೆ ಮೊನ್ನೆ ಮೊನ್ನೆಯಷ್ಟೇ ನಡೆದ ಹುಲಿ ಹತ್ಯೆ ಮಹಾರಾಷ್ಟ್ರ ರಾಜ್ಯದ ಸರ್ಕಾರ ಮತ್ತು ಜನರ ಅತೀವ ಸಂತಸಕ್ಕೆ ಕಾರಣವಾಗಿದೆ.ಅರೇ ರಾಷ್ಟ್ರೀಯ ಪ್ರಾಣಿ ಹತ್ಯೆಯಾದರೆ ಸಂತಸಪಡುತ್ತಾರೆಯೇ? ಎಂದು ಗೊಂದಲಕ್ಕೆ ಬೀಳಬೇಡಿ. ಕಾರಣ ಆ ಹುಲಿ ಅಂತಿಂತಹ ಹುಲಿಯಲ್ಲ. ಆರು ವರ್ಷಗಳ ಈ ಹೆಣ್ಣು ಹುಲಿ ಕೇವಲ 2 ವರ್ಷಗಳ ಅಂತರದಲ್ಲಿ ಒಂದೆರಡಲ್ಲ ಬರೋಬ್ಬರಿ ಹದಿಮೂರು ಜನರನ್ನು ತಿಂದು ತೇಗಿದ ಬಯಾನಕ ಹುಲಿ.

ಕಾಡಿನಲ್ಲಿ. ಪ್ರಾಣಿಗಳನ್ನು ಮೇಯಿಸಲು ಹೋಗಿದ್ದ ಹನ್ನೊಂದು ಮಂದಿಯನ್ನು ಮತ್ತು ಕಾಡಿನಂಚಿನ ಹೊಲಕ್ಕೆ ನುಗ್ಗಿ ಕೆಲಸ ಮಾಡುತ್ತಿದ್ದ ಇಬ್ಬರ ಪ್ರಾಣ ತಗೆದು ಮಹಾರಾಷ್ಟ್ರದ ಯವತ್ನಾಳ ಜಿಲ್ಲೆಯಾದ್ಯಂತ ಭಯದ ಕಾರ್ಮೋಡ ಕವಿಯುವಂತೆ ಮಾಡಿದ ಯಮದೂತ ಈ #ಅವನಿ# (ಟಿ-1 ಎಂಬ ಹೆಸರು ಸಹ ಇದೆ)

Loading...

ಈ ಹುಲಿಯ ವಯಸ್ಸು ಆರು ವರ್ಷ‌. ಇದು ಮೊದಲ ಬಾರಿಗೆ ಮನುಷ್ಯನ ರಕ್ತದ ರುಚಿ ನೋಡಿದ್ದು 2016 ಜೂನ್ 1 ರಂದು. ಮನುಷ್ಯನ ರಕ್ತದ ರುಚಿ ನೋಡಿದ ಹುಲಿ ಮನುಷ್ಯನ ರಕ್ತವನ್ನೇ ಬಯಸುತ್ತದೆ ಎಂಬ ಮಾತು ಇಲ್ಲಿಯೂ ಸತ್ಯವಾಯಿತು‌. ಮನುಷ್ಯನ ಬೇಟೆ ಇದಕ್ಕೆ ಅಭ್ಯಾಸ ಆಗಿ ಬಿಟ್ಟಿತು ಎಂದರೂ ತಪ್ಪಿಲ್ಲ. ಕಳೆದ ಅಗಷ್ಟ ತಿಂಗಳಲ್ಲಿ ಇದರ ಹಾವಳಿ ಮಿತಿ ಮೀರಿದ್ದು ಒಂದೇ ತಿಂಗಳಲ್ಲಿ ಮೂವರನ್ನು ತಿಂದು ಮುಗಿಸಿತ್ತು.

ಇದರಿಂದ ಮಹಾರಾಷ್ಟ್ರ ಅರಣ್ಯ ಇಲಾಖೆ ಸಪ್ಟೆಂಬರ್ 4ರಂದು ಷಇದರ ಬೇಟೆಗೆ ಯೋಜನೆ ರೂಪಿಸಿತ್ತು‌.ಇದು ಪ್ರಾಣಿ ಪ್ರೀಯರ ಕೆಂಗಣ್ಣಿಗೆ ಗುರಿಯಾಗಿ ನಾಗ್ಪುರ ಹೈಕೋರ್ಟ್ ವರೆಗೂ ಈ ವಿಚಾರ ಹೋಗಿ ಆರಂಭದಲ್ಲಿ ಹುಲಿ ಹತ್ಯೆಗೆ ಹೈಕೋರ್ಟ್ ವಿರೋಧ ವ್ಯಕ್ತಪಡಿಸಿದ್ದರೂ ಮುಂದೆ ಹತ್ಯೆಗೆ ಒಪ್ಪಿಗೆ ನೀಡಿತ್ತು‌..ಮುಂದೆ. ಇದೇ ತೀರ್ಪನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿತ್ತು. ಸೆರೆ ಹಿಡಿಯಲು ಆಗದಿದ್ದರೆ ಬೇಟೆಯಾಡಿ ಎಂದು ಹೇಳಿತ್ತು. (ಸಪ್ಟೆಂಬರ್೧೧ರಂದು)

ಅರಣ್ಯ ಇಲಾಖೆ ತನ್ನ ಕೊನೆಯ ಅಸ್ತ್ರ ಎಂಬಂತೆ #ಹುಲಿ# ನವಾಬ್# ಎಂದೇ ಕರೆಯಲ್ಪಡುವ ಶಾಖತ್ – ಅಲಿ -ಖಾನ್ ಅವರನ್ನು ಈ ಕಾರ್ಯಾಚರಣೆಗೆ ಕರೆಯಿಸಿತ್ತು. (ಇವರು ಮೂಲತಃ ಹೈದರಾಬಾದ್ ನವರಾಗಿದ್ದು ಇದುವರೆಗೂ 250 ಕ್ಕೂ ಹೆಚ್ಚು ಕ್ರೂರ ಪ್ರಾಣಿಗಳನ್ನು ಸಾಯಿಸಿದ್ದಾರೆ‌. ದೇಶದ ನಂಬರ್ ಒನ್ ಬೇಟೆಗಾರ ಎಂಬ ಖ್ಯಾತಿಯ ಜೊತೆಗೆ ಪ್ರಾಣಿ ಬೇಟೆಗೆ ಪರವಾನಗಿ ಹೊಂದಿರುವ ಏಕೈಕ ವ್ಯಕ್ತಿ ಇವರು)

ತಮ್ಮ ಸಿಬ್ಬಂದಿ ಜೊತೆಗೆ ಬಂದಿದ್ದ ಇವರು ಮತ್ತು ಅರಣ್ಯ ಇಲಾಖೆಯ ಒಟ್ಟು 200 ಮಂದಿ ಮತ್ತು ವಿದೇಶಿ ತಳಿಯ ನಾಯಿಗಳು,ಆನೆ, ಸಾಲದ್ದಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದರೂ ಹುಲಿಯ ಬೇಟೆಗೆ ಹಲವು ಬಗೆಯ ಉಪಾಯ ಬಳಸಿ 170 ಚ.ಕೀ.ಮೀ. ಅರಣ್ಯದಲ್ಲಿ ಹುಡುಕಿದರೂ ಅವಕೆಲ್ಲ ಮಣ್ಣು ಮುಕ್ಕಿಸಿ ಮೂರು ತಿಂಗಳುಗಳ ಕಾಲ ಆಟವಾಡಿಸಿದ್ದ ಬುದ್ದಿವಂತ ಹುಲಿಯಿದು‌

ಇದರ ಬುದ್ದಿವಂತಿಕೆ ಮುಂದೆ ಸೋತಿದ್ದ ಹುಲಿ ನವಾಬ್ ಯೋಜನೆ ನಿಲ್ಲಿಸಿ ಮರಳಿ ಹೋಗಿದ್ದರು. ಕೊನೆಗೆ ಎರಡನೇ ಬಾರಿ ಬಂದಾಗ ತಮ್ಮ ಮಗ ಅಸ್ಗರ್-ಅಲಿ-ಖಾನ್ ಜೊತೆ ಬಂದಿದ್ದರು.

ಕಳೆದ ಶುಕ್ರವಾರ ಹುಲಿಯ ಓಡಾಟದ ಮಾಹಿತಿ ಪಡೆದು ಆ ಪ್ರದೇಶಕ್ಕೆ ಬಂದಿದ್ದರು. ಅದರ ಅಟ್ಟಹಾಸಕ್ಕೆ ತೆರೆ ಬೀಳುವ ಸಮಯ ಸುಮಾರು ಹನ್ನೊಂದು ಗಂಟೆಯ ಕಾರ್ಗತ್ತಲೆಯಲ್ಲಿ ಬಂದಿತ್ತು ಎಂದು ಕಾಣುತ್ತದೆ‌. ಅರಣ್ಯ ಸಿಬ್ಬಂದಿ ಹುಲಿಯ ಬರುವಿಕೆ ಕಾದಿದ್ದ ಅಧಿಕಾರಿಗಳು ಅದರತ್ತ ಅರವಳಿಕೆ ಮದ್ದು ಪ್ರಯೋಗಿಸಿದರೂ ಪ್ರಯೋಜನ ಆಗಲಿಲ್ಲ. ಆದರೆ ಬಂದೂಕಿನ ಜೊತೆ ತಯಾರಾಗಿದ್ದ ಅಸ್ಗರ್ (ತಂದೆ ಪಾಟ್ನಾದಲ್ಲಿ ನಡೆಯುತ್ತಿದ್ದ ವನ್ಯಜೀವಿ ಸಂರಕ್ಷಣಾ ಸಮ್ಮೇಳಕ್ಕೆ ಹೋಗಿದ್ದರು.) ಸಿಡಿಸಿದ ಒಂದೇ ಒಂದು ಗುಂಡು ನರಭಕ್ಷಕ ಹೆಣ್ಣು ಹುಲಿಯ ಗುಂಡಿಗೆಯ ಶಬ್ದವನ್ನು ನಿಲ್ಲಿಸಿತ್ತು.

ಹೀಗೆ ನರಭಕ್ಷಕ ಹುಲಿಯ ಭಯ ಜನರ ಮನಸ್ಸಿನಿಂದ ಹುಲಿಯ ಸಾವಿನೊಂದಿಗೆ ಸತ್ತು ಹೋದರೆ ಹುಲಿ ವಿವಾದಗಳಿಂದ ಜೀವಂತವಾಗಿ ಇದೆ. ಪ್ರಾಣಿ ಪ್ರೀಯರ ಕೋಪಕ್ಕೆ ಇದು ಕಾರಣವಾಗಿದೆ (ಭಾರತೀಯ ಕಾನೂನಿನ ಪ್ರಕಾರ ಹುಲಿಗೆ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯದಲ್ಲಿ ಅರವಳಿಕೆ ಮದ್ದು ಸಹ.ನೀಡುವಂತೆ ಇಲ್ಲ. ) ಇದನ್ನು ಮುಂದಿಟ್ಟುಕೊಂಡು ಹೋರಾಟ ಕೂಡ ಆಗುತ್ತಿದೆ.

ಇದರ ಬಗ್ಗೆ ಓದುಗರೇ ನಿಮಗೊಂದು ಪ್ರಶ್ನೆ
ನಿಯಮ ಪಾಲನೆ ಸಲುವಾಗಿ ಬೆಳಗಿನ ಜಾವದ ವರೆಗೆ ಕಾದು ಕುಳಿತಿದ್ದರೆ ಪುನಃ ಆ ಹುಲಿ ಸಿಗುವ ಭರವಸೆ ಏನಿತ್ತು..?ಅಲ್ಲದೆ ಒಂದು ವೇಳೆ ಹುಲಿ ಬೇಟೆಗೆ ಹೋಗಿದ್ದ ಅಲ್ಲಿನ ಯಾವದಾದರೂ ಅಧಿಕಾರಿಯೇ ಹುಲಿಗೆ ಶಿಕಾರಿ ಆಗಿದ್ದರೆ ಅದಕ್ಕೆ ಹೊಣೆ ಯಾರಾಗುತಿದ್ದರು?ದೇಶದಲ್ಲೇ ವನ್ಯಜೀವಿ ಬೇಟೆಗೆ ನಡೆದ ಈ ಕಾರ್ಯಾಚರಣೆ ವಿವಾದ ಹುಟ್ಟು ಹಾಕಿದ್ದು ಮಾತ್ರ ವಿಪರ್ಯಾಸ
ರೋಹನ್ ಪಿಂಟೋ ಗೇರುಸೊಪ್ಪ

  • 13
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...