ಮಾಹಿತಿ - ತಂತ್ರಜ್ಞಾನ

ತುಳಸಿ ಪೂಜೆ


ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ಇದನ್ನು ದೈವಿಕ ಭಾವನೆಯಿಂದ ನೋಡಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ತುಳಸಿ ಕಟ್ಟೆ ಇರದ ಹಿಂದೂ ಧರ್ಮಿಯರ ಮನೆ ಕಾಣಸಿಗದು.ಇದನ್ನು ಸಾಕ್ಷಾತ್ ನಾರಾಯಣನ ಪತ್ನಿಯೆಂದು ನಂಬಲಾಗಿದೆ.ಪ್ರತಿವರ್ಷ ತುಳಸಿ ಪೂಜೆ ಮತ್ತು ತುಳಸಿ ನಾರಾಯಣರ ವಿವಾಹ ನೆರವೇರಿಸಲಾಗುತ್ತದೆ.ಅಂದು ತುಳಸಿ ಕಟ್ಟೆಯನ್ನು ರಂಗೋಲಿ ಹೂವು ಮಾವಿನ ಎಲೆಗಳನ್ನು ಬಳಸಿ ಸುಂದರವಾಗಿ ಅಲಂಕಾರ ಮಾಡಿ ಗೋಧೋಳಿ ಸಮಯದಲ್ಲಿ ತುಳಸಿ ಪೂಜೆ ಮಾಡಲಾಗುತ್ತದೆ.

ಅನಾದಿ ಕಾಲದಿಂದಲೂ ಈ ಸಂಪ್ರದಾಯ ನಡೆದು ಬಂದಿದೆ.‌‌ತುಳಸಿ ಪೂಜೆಗೆ ಶೋಢಷೋಪಚಾರ ವಿಧಾನ ಅನುಸರಿಸಲಾಗುತ್ತದೆ. ಪೂಜೆಗೆ ಬೆಟ್ಟದ ನೆಲ್ಲಿಕಾಯಿ ಅತ್ಯಗತ್ಯವಾಗಿದೆ. ಸುಮಂಗಲಿಯರೆಲ್ಲ ಒಂದಾಗಿ ತುಳಸಿಗೆ ಆರತಿ ಬೆಳಗಬೇಕು.ಮನೆ ಮುಂದೆ ದೀಪಗಳನ್ನು ಹಚ್ಚಿ ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಸಸ್ಯ ಮತ್ತು ಶ್ರೀಕೃಷ್ಣನ ಮೂರ್ತಿ ಇಡಬೇಕುಮೊದಲು ಗಣಪತಿ ಪೂಜೆ ಮಾಡಿ ಬಳಿಕ ಕುಟುಂಬದ ಸದಸ್ಯರು ಒಟ್ಟಾಗಿ ಶೋಡಷೊಪಚಾರದ ಮೂಲಕ ತುಳಸಿ ಪೂಜೆ ಮಾಡಬೇಕು. ನಂತರ ತುಳಸಿಗೆ ಮಾಂಗಲ್ಯ ಧಾರಣೆ ಮಾಡಿಸಬೇಕು‌. ಹಾಗೂ ತುಪ್ಪದ ದೀಪವನ್ನು ಬಾಳೆ ದಿಂಡಿನ ಮೇಲೆ ಹಚ್ಚಿ ತುಳಸಿಗೆ ಅವಲಕ್ಕಿ ಬೆಲ್ಲದ ನೈವೇದ್ಯವನ್ನು ನೀಡಬೇಕು. ಮುತೈದೆಯರು ತುಳಸಿಗೆ ಆರತಿ ಎತ್ತಿದ ಬಳಿಕ ಸುಮಂಗಲಿಯರಿಗೆ ಅರಶಿನ ಕುಂಕುಮ ಮತ್ತು ತಾಂಬೂಲ ನೀಡಬೇಕು.

Loading...

ತುಳಸಿ ಪೂಜಾ ಫಲಗಳು ಇಂತಿವೆ ತುಳಸಿ ಪೂಜೆಯಿಂದ ದಾರಿದ್ರ್ಯ ದೂರಾಗುತ್ತದೆ.ಜನ್ಮಾಂತರದ ಪಾಪ ನಿವಾರಣೆ ಆಗುತ್ತದೆ.ಸಂತಾನ ಪ್ರಾಪ್ತಿಆರೋಗ್ಯ ವೃದ್ಧಿಇಷ್ಟಾರ್ಥ ಸಿದ್ದಿಬದುಕಿನಲ್ಲಿ ಸುಖ ಶಾಂತಿ ದೊರೆಯುತ್ತದೆ.ಇನ್ನೂ ವಿಶೇಷವಾಗಿ ತುಳಸಿಯ 8 ಹೆಸರುಗಳನ್ನು ಹೇಳುತ್ತಾ ಪೂಜೆ ಮಾಡಿದರೆ ಅಶ್ವಮೇದ ಫಲ ಸಿಗುತ್ತದೆ.

(ಆ 8 ಹೆಸರುಗಳು:ತುಳಸಿ ವೃಂದವೃಂದಾವನಿವಿಶ್ವಪೂಜಿತಪುಷ್ಪಸಾರಾನಂದಿನಿಕೃಷ್ಣ ಜೀವನಿವಿಶ್ವಪಾವನಿ)ಮನೆಯಲ್ಲಿ ತುಳಸಿ ಇದ್ದಲ್ಲಿ ವಾಸ್ತು ದೋಷವನ್ನು ನಿವಾರಿಸುವುದು ಆದರೆ ಗಮನಿಸಬೇಕಾದ ಅಂಶವೆಂದರೆ ಯಾವುದೇ ಕಾರಣಕ್ಕೂ ತುಳಸಿ ಸಸ್ಯವನ್ನು ಒಣಗಿಸಬಾರದು.ತುಳಸಿಯನ್ನ ಭಕ್ತಿಯಿಂದ ಪೂಜಿಸಿ ಅವಳ ಕೃಪೆಗೆ ಎಲ್ಲರೂ ಆರ್ಶೀವಾದ ಪಡೆಯೋಣ.-
ಲೇಖನ:ಕಲಾಶಿಲ್ಪಾ

  • 401
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...