ನಮ್ಮ ಕರ್ನಾಟಕ ಸುದ್ದಿ ವೀಡಿಯೋಗಳು

ಮೆಟ್ರೊ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು : ಮೆಟ್ರೊ ರೈಲು ಹಳಿ ಮೇಲೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಆತಂಕಕಾರಿ ಘಟನೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ನಡೆದಿದೆ.ಯಲಚೇನಹಳ್ಳಿ ಕಡೆಯಿಂದ ನಾಗಸಂದ್ರ ಮಾರ್ಗದ ಮೆಟ್ರೊ ರೈಲು, ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣಕ್ಕೆ ಬೆಳಿಗ್ಗೆ 11.10ರ ವೇಳೆ ಬರುತ್ತಿದ್ದಾಗ ಏಕಾಏಕಿ ಸೆಕ್ಯುರಿಟಿ ಗಾರ್ಡ್‌ಗಳ ಕಣ್ತಪ್ಪಿಸಿ, ಹಳಿ ಮೇಲೆ ಹಾರಿದ್ದಾನೆ.ನಾಲ್ಕು ರೈಲ್ವೆ ಹಳಿಗಳ ಮಧ್ಯೆ ಬಿದ್ದ ಯುವಕನಿಗೆ ತಲೆಗೆ ಪೆಟ್ಟಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನೆಟ್ಟಕಲ್ಲಪ್ಪ ವೃತ್ತದ ಡಿಕೆ ಟೈಲಱ್ಸ್‌ನಲ್ಲಿ ಟೈಲರ್ ಆಗಿ ಕೆಲಸ ಮಾ‌ಡುತ್ತಿದ್ದ ವೇಲು (28) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಪ್ರಯಾಣಿಕರು ಇನ್ನೇನು ರೈಲಿಗೆ ಹತ್ತಲು ಸಿದ್ಧವಾಗುತ್ತಿರುವಾಗಲೇ ಸೆಕ್ಯುರಿಟಿ ಗಾರ್ಡ್‌ಗಳ ಕಣ್ತಪ್ಪಿಸಿ ಏಕಾಏಕಿ ಯುವಕ ಹಳಿಗಳ ಮೇಲೆ ಹಾರಿದ್ದಾನೆ.ಅದೃಷ್ಟವಶಾತ್ ಹಳಿಗಳ ಮೇಲೆ ಯುವಕ ಬೀಳದ್ದಿದ್ದರಿಂದ ವಿದ್ಯುತ್ ಹರಿದಿಲ್ಲ. ಇಲ್ಲದಿದ್ದರೆ ಆತ ಸ್ಥಳದಲ್ಲೇ ಸುಟ್ಟು ಕರಕಲಾಗುತ್ತಿದ್ದ. ಯುವಕ ಹಳಿಗಳ ಮೇಲೆ ಹಾರಿದ ತಕ್ಷಣ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

Loading...

ಹಳಿಗಳ ಮೇಲೆ ಹರಿಯುತ್ತಿದ್ದ ವಿದ್ಯುತ್‌ನ್ನು ಸ್ಥಗಿತಗೊಳಿಸಿ ಮೆಟ್ರೊ ಸಿಬ್ಬಂದಿ ಗಾಯಗೊಂಡಿದ್ದ ಯುವಕನನ್ನು ರಕ್ಷಿಸಿ ಮೇಲೆತ್ತಿದರು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಮೊದಲು ವಿಕ್ಟೋರಿಯಾ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಯಿಂದ ಯಲಚೇನಹಳ್ಳಿ ನಾಗಸಂದ್ರ ಮಾರ್ಗದ ಹಸಿರು ಮೆಟ್ರೊ ಸಂಚಾರ 1 ಗಂಟೆ ವ್ಯತ್ಯಯವಾಗಿತ್ತು. ಇದೇ ಮೊದಲ ಬಾರಿಗೆ ಆತ್ಮಹತ್ಯೆ ಯತ್ನ ನಡೆದಿದ್ದು, ನಾಗರಿಕರಲ್ಲಿ ಆತಂಕ ಸೃಷ್ಠಿಸಿದೆ.

  • 4
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...